ಬ್ಯಾರಿ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿ
ಹಂಝ ಮಲಾರ್
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರನ್ನು ಮೂಲವಾಗಿಸಿಕೊಂಡಿರುವ ಬ್ಯಾರಿಗಳು ಧಾರ್ಮಿಕವಾಗಿ ಇಸ್ಲಾಂ ಧರ್ಮದ ಅನುಯಾಯಿಗಳು. ಧಾರ್ಮಿಕ ನಂಬಿಕೆ, ವಿಧಿ-ವಿಧಾನ, ಕರ್ಮ ಇತ್ಯಾದಿಯ ಜತೆಗೆ ಪ್ರಾದೇಶಿಕ ಆಚಾರ-ವಿಚಾರಗಳನ್ನು ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿರುವುದು ಸ್ಟಷ್ಟ.
ಬ್ಯಾರಿಗಳ ರಾಜಧಾನಿ `ಮೈಕಾಲ’ ಅಂದರೆ ಮಂಗಳೂರು. ಕಾಸರಗೋಡಿನ ಚಂದ್ರಗಿರಿ ತೀರದಿಂದ ಕುಂದಾಪುರದ ಬಾರ್ಕೂರುವರೆಗೆ ಬ್ಯಾರಿಗಳು ನೆಲೆಸಿದ್ದರು ಎಂಬುದು ಪ್ರತೀತಿ. ಕಸಬಿನ ನಿಮಿತ್ತ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ಬ್ಯಾರಿ ಜನಾಂಗಕ್ಕೆ ಸುಮಾರು ೧೨೦೦ ವರ್ಷಗಳ ಇತಿಹಾಸವಿದೆ ಎಂಬುದು ಚರಿತ್ರೆಕಾರರ ಅಭಿಪ್ರಾಯ.
ಅಂದಹಾಗೆ, ಬ್ಯಾರಿಗಳ ಉಚ್ಛಾçಯ ಕಾಲದಲ್ಲಿ ದೊಡ್ಡ ದೊಡ್ಡ ಬ್ಯಾರಿ ಮನೆತನಗಳು ಕಂಡು ಬಂದಿರುವುದು ಕೂಡ ಮಂಗಳೂರಿನಲ್ಲೇ. ಇಸ್ಲಾಂನಲ್ಲಿ ಮೇಲು-ಕೀಳು ಎಂಬುದಿಲ್ಲ. ಆದರೆ ಇಸ್ಲಾಂ ಧರ್ಮದ ಅನುಯಾಯಿಗಳಾಗಿದ್ದ ಬ್ಯಾರಿಗಳು ಸ್ಥಳೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿ ತಮ್ಮೊಳಗೆ ಇಲ್ಲ' ಎಂಬ ಪದ್ಧತಿಯನ್ನು ಅನುಸರಿಸುವ ಮೂಲಕ ಅರಿವಿದ್ದೋ, ಇಲ್ಲದೆಯೋ
ಮೇಳು-ಕೀಳು’ ಕ್ರಮದೊಂದಿಗೆ ಬದುಕು ಸಾಗಿಸುತ್ತಿದ್ದರು. ಕ್ರಮೇಣ ಧಾರ್ಮಿಕ ಪ್ರಜ್ಞೆ ಬೆಳೆದಾಗ ಜಗತ್ತು ಆಧುನೀಕರಣ'ಗೊಂಡಾಗ ಈ ಪದ್ಧತಿಯೂ ಕಣ್ಮರೆಯಾಯಿತು. ಈಗ ಬ್ಯಾರಿ ಮುಸ್ಲಿಮರಲ್ಲಿ
ಇಲ್ಲ’ ಪದ್ಧತಿಯೂ ಇಲ್ಲ. ಧರ್ಮದ ವಿಧಿ ವಿಧಾನದ ಸಂದರ್ಭದಲ್ಲAತೂ ಮೇಲು-ಕೀಳು ಎಂಬುದಿಲ್ಲ. ಉದಾಹರಣೆಗೆ:- ಮಸೀದಿಯಲ್ಲಿ ಕರಿಯ-ಬಿಳಿಯ, ಬಡವ-ಶ್ರೀಮಂತ, ಹಿರಿಯ-ಕಿರಿಯ ಎಂಬ ಭೇದÀವಿಲ್ಲದೆ ನಮಾಝ್ ಮಾಡಬಹುದಾಗಿದೆ.
ಆಚರಣೆ, ಸಂಪ್ರದಾಯದ ವಿಷಯಕ್ಕೆ ಬರುವಾಗ ಮುಖ್ಯವಾಗಿ ಬ್ಯಾರಿಗಳ ಮದುವೆ ಪದ್ಧತಿ ಗಮನ ಸೆಳೆಯುತ್ತದೆ. ಇಸ್ಲಾಂ ಸರಳತೆಗೆ ಒತ್ತು ನೀಡಿದ್ದರೂ ಕೂಡ ಬ್ಯಾರಿಗಳ ಮದುವೆ ಮಾತ್ರ ಅದ್ದೂರಿಯಾಗಿ ನಡೆಯುತ್ತಿದೆ. ಪ್ರಾಚೀನ ಬ್ಯಾರಿಗಳ ಮದುವೆ ಕನಿಷ್ಠ ೧೫ ದಿನಗಳವರೆಗೂ ನಡೆಯುತ್ತದೆ. ಅದೂ ರಾತ್ರಿ ಹೊತ್ತು!. ಬ್ಯಾರಿಗಳ ಮದುವೆ ಪದ್ಧತಿ ಕೂಡ ವಿಶಿಷ್ಟವಾಗಿದೆ. ಹೆಚ್ಚಿನ ಕೆಲವು ಕಟ್ಟುಪಾಡುಗಳು ತುಳುವರಿಂದ ಪ್ರಭಾವಿತಗೊಂಡಿದೆ.
ಹಿಂದೆ ಬ್ಯಾರಿಗಳಲ್ಲಿ `ತಲಕಾರ್ ಅಥವಾ ಪೌನಾರ್ ಅಗ’ ಎಂಬ ಮನೆತನಗಳು ಇದ್ದವು. ಬಳಿಕ ಇದು ೨೧ ಮನೆತನವಾಗಿ ಕವಲೊಡೆಯಿತು. ಕ್ರಿ.ಶ. ೧೯೪೦ರವರೆಗೂ ಈ ಮನೆತನಗಳ ಮಧ್ಯೆ ಮಾತ್ರ ಮದುವೆ ನಡೆಯುತ್ತಿತ್ತು. ಇತರ ಬ್ಯಾರಿಗಳ ಜತೆ ಈ ಮನೆತನದವರು ಮದುವೆ ಸಂಬAಧ ಬೆಳೆಸುತ್ತಿರಲಿಲ್ಲ ಎಂಬುದನ್ನು ದಾಖಲೆಗಳು ತಿಳಿಸುತ್ತದೆ. ಅಲ್ಲದೆ ತಲಕಾರ್‌ನ ಮದುವೆಯಲ್ಲಿ ಇತರ ಬ್ಯಾರಿಗಳು ಕೂಡ ಭಾಗವಹಿಸುತ್ತಿರಲಿಲ್ಲ. ಅವರೊಂದಿಗೆ ಸಂಭಾಷಿಸುವುದು ಬಿಡಿ, ಮೆಟ್ಟು ಹಾಕಿ ನಡೆಯುವಂತೆಯೂ ಇರಲಿಲ್ಲ ಎಂಬ ಪ್ರತೀತಿ ಇದೆ. ಕೆಲವೊಮ್ಮೆ ತಲಕಾರ್‌ನ ಯುವಕರು ಹೊರಗಿನ ಯುವತಿಯನ್ನು ಮದುವೆಯಾಗಿ ಮನೆಯೊಳಗೆ ಕರೆತರುತ್ತಿದ್ದರು. ಆದರೆ ತಲಕಾರ್‌ನ ಹುಡುಗಿಯನ್ನು ಹೊರಗಿನ ಯುವಕರಿಗೆ ಮದುವೆ ಮಾಡಿಕೊಡುತ್ತಿರಲಿಲ್ಲ. ಒಂದು ವೇಳೆ ತಲಕಾರ್‌ನ ಹುಡುಗಿ ಹೊರಗಿನ ಯುವಕನನ್ನು ಮದುವೆಯಾದರೆ ಆಕೆಗೆ ತಲಕಾರ್ ಮನೆತನದ ವಿಶೇಷ ಮರ್ಯಾದೆ ಮತ್ತು ಹಕ್ಕುಗಳು ಕೈ ತಪ್ಪಿ ಹೋಗುತ್ತಿತ್ತು.
ಎಲ್ಲೋ ಒಬ್ಬ ಮದುವೆಯಾಗುವ ಯುವಕ ಇದ್ದಾನೆ ಎಂದು ಪ್ರಾಯಕ್ಕೆ ಬಂದ ಹೆಣ್ಮಗಳ ಕಡೆಯವರೂ ಅಥವಾ ಹುಡುಗಿ ಇದ್ದಾಳೆ ಎಂದು ಯುವಕನ ಕಡೆಯಯವರು ತಿಳಿದು ವಿವಾಹ ಸಂಬAಧದ ಬಗ್ಗೆ ಮಾತುಕತೆ ಆರಂಭಿಸುತ್ತಿದ್ದರು. ಹೆಚ್ಚಾಗಿ ವರನ ಮನೆಗೆ ಹುಡುಗಿಯ ಮನೆಯವರು ಮದುವೆ ಕುರಿತು ಮಾತನಾಡಲು ಹೋಗುತ್ತಿದ್ದರು. ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ಕುಟುಂಬದ ಹಿರಿಯ ಸದಸ್ಯನಿಗೆ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಈ ಹಿರಿಯ ವ್ಯಕ್ತಿಗೆ `ಸಬೆಕಾರ ಅಥವಾ ಲೇಸ್‌ಕಾರ’ ಎನ್ನುತ್ತಿದ್ದರು. ಈ ಹಿರಿಯ ಸದಸ್ಯನ ಸಲಹೆ-ಸೂಚನೆ ಮೇರೆಗೆ ಕುಟುಂಬದ ಇತರ ಸದಸ್ಯರು ಮದುವೆ ಕೆಲಸ ಕಾರ್ಯಗಳ ಜವಾಬ್ದಾರಿ ಹಂಚಿಕೊಳ್ಳುತ್ತಿದ್ದರು.
ಹಿAದಿನ ಕಾಲದಲ್ಲಿ ಈಗಿನಂತೆ ಹಗಲು ಹೊತ್ತು ಅದೂ ಹಾಲ್(ಸಭಾಂಗಣ)ನಲ್ಲಿ ಮದುವೆ ನಡೆಯುತ್ತಿರಲಿಲ್ಲ. ಮಳೆಗಾಲ, ಬೇಸಿಗೆಗಾಲ, ಚಳಿಗಾಲ ಎನ್ನದೆ (ರಮಝಾನ್ ಉಪವಾಸ ತಿಂಗಳ ಹೊರತುಪಡಿಸಿ) ರಾತ್ರಿ ಹೊತ್ತು ಮನೆಯಲ್ಲೇ ಮದುವೆ ನಡೆಯುತ್ತಿತ್ತು. ಮರ‍್ನಾಲ್ಕು ದಿನಗಳ ಮುಂಚೆಯೇ ಹತ್ತಿರದ ಬಂಧುಗಳು ಮದುವೆ ಮನೆಗೆ ಲಗ್ಗೆಯಿಡುತ್ತಿದ್ದರು. ಕಂಗು, ಕಂಗಿನ ಸಲಾಕೆ, ಬಿದಿರು ಕಟ್ಟಿ ಅದರ ಮೇಲೆ ತೆಂಗಿನ ಮಡಲನ್ನು ಹಾಸುತ್ತಿದ್ದರು. ಮದುವೆಗೆ ತಂದ ಆಹಾರ ಸಾಮಗ್ರಿಗಳ ಕಟ್ಟುಗಳನ್ನು ಬಿಚ್ಚಿ ಮೆಣಸಿನ ತೊಟ್ಟು ತೆಗೆಯುವುದು, ಅಕ್ಕಿಯ ಕಲ್ಲು ಹೆಕ್ಕುವುದು, ಕಡೆಯುವ ಕಲ್ಲಿನ ಕುಟ್ಟುವುದು, ಅರೆಯುವುದು ಇತ್ಯಾದಿ ಕೆಲಸ ಮಾಡುವುದು ಸಾಮಾನ್ಯವಾಗಿತ್ತು.
- ಕಜಂಬು : ಮಗು ಹುಟ್ಟಿದ ಹದಿನೈದು ಅಥವಾ ಮೂವತ್ತನೆ ದಿನದಂದು ಹೆಣ್ಣು-ಗಂಡು ಬೇಧವಿಲ್ಲದೆ
ಕಜಂಬು' (ತಲೆ ಕ್ಷೌರ) ಮಾಡಲಾಗುತ್ತದೆ. ಇದಕ್ಕೆ ಬ್ಯಾರಿಗಳು
ಕಜಂಬು (ಕೊಜಂಬು) ಎಡ್ಕ್ಡೆ’ ಎನ್ನುತ್ತಾರೆ. ಆ ದಿನ ಗಂಡಿನ ಕಡೆಯಿಂದ ಸ್ತಿçÃಯರು ಆಗಮಿಸಿ ತಾಯಿ ಮತ್ತು ಮಗುವಿಗೆ ಬಟ್ಟೆಬರೆ, ಕಾಲು ಚೈನು, ನಡು ಚೈನು, ಉಂಗುರ ಇತ್ಯಾದಿ ಆಭರಣ ತಂದು ತೊಡಿಸುತ್ತಾರೆ.
ಹಾಗೇ `ಕಜಂಬು’ ಮಾಡಿದ ತಲೆಗೂದಲನ್ನು ತೋಡು, ನದಿ, ಸಮುದ್ರಗಳಿಗೆ ಬಿಡುತ್ತಾರೆ. ಕೆಲವರು ಅದನ್ನು ತೆಂಗಿನ ಮರಕ್ಕೂ ಕಟ್ಟಿ ಹಾಕುತ್ತಾರೆ. ಅಷ್ಟೇ ಅಲ್ಲ ಆ ಕೂದಲನ್ನು ತೂಗಿ ನೋಡಿ ಅಷ್ಟು ಗ್ರಾಮ್‌ಗೆ ತಕ್ಕಂತೆ ಚಿನ್ನವನ್ನು ಮಸೀದಿ ಅಥವಾ ಮುಖಾಮು (ದರ್ಗಾ)ಗೆ ನೀಡುತ್ತಾರೆ. ಹಿಂದೆ ಬಾಲ್/ಚಾಕ್‌ನಿಂದ ಕಜಂಬು ತೆಗೆಯುತ್ತಿದ್ದರೆ, ಇದೀಗ ಅದರ ಸ್ಥಾನವನ್ನು ಬ್ಲೇಡ್ ಆಕ್ರಮಿಸಿಕೊಂಡಿದೆ. ಆ ದಿನವೂ ತ್ಯಾಙೆ್ಯರೆ ಚಲ್ಲಿ, (ಸಕ್ಕರೆ ಬೆರೆಸಿದ ತೆಂಗಿನ ಕಾಯಿಯ ತುಂಡು),ಕಲ್ಕಾAಡಿ (ಕಲ್ಲುಸಕ್ಕರೆ), ಮಿಠಾಯಿ ಕಡ್ಲೆ ಹಂಚುತ್ತಾರೆ. ಅಲ್ಲದೆ ನೆರೆಕರೆ ಮತ್ತು ಹತ್ತಿರದ ಸಂಬAಧಿಕರಿಗೆ ಕರೆ ನೀಡಿ ವಿಶೇಷ ಭೋಜನ ನೀಡುತ್ತಾರೆ.
- ನಾಪೊವುರೆ ಕುಲಿ : ಮಗುವಿಗೆ ಜನ್ಮವಿತ್ತ ಹೆಣ್ಣು ತನ್ನ ನಲ್ವತ್ತನೇ ದಿನದಲ್ಲಿ ತನ್ನ ಪತಿಯ ಮನೆಗೆ ಮಗುವಿನ ಜತೆಗೂಡಿ ಹೋಗಿ ಒಂದೆರೆಡು ದಿನ ಇದ್ದು ಬರುವುದು ಸಂಪ್ರದಾಯ. ಆವಾಗ ಮಾಡುವ ಸ್ನಾನಕ್ಕೆ
ನಾಪೊವುರೆ ಕುಲಿ' (ನಲ್ವತ್ತರ ಸ್ಥಾನ) ಅಥವಾ
ನಾಪೊವುಲು ಕುಲಿಚ್ಚಿ ಎನಿಕ್ಕ್ರೆ’ (ನಲ್ವತ್ತರ ಸ್ನಾನ ಮಾಡಿ ಏಳುವುದು) ಎನ್ನುತ್ತಾರೆ. ಇದನ್ನು ಅತ್ಯಂತ ಸಂಭ್ರಮದಿAದಲೇ ಆಚರಿಸುತ್ತಾರೆ. ಈ ವೇಳೆಯೂ ಪತಿ ತನ್ನ ಪತ್ನಿ ಮತ್ತು ಮಗುವಿಗೆ ಹೊಸ ಬಟ್ಟೆಬರೆಯನ್ನು ಉಡುಗೊರೆಯಾಗಿ ನೀಡುತ್ತಾನೆ. ಇದು ಹೆಣ್ಣಿನ ಮನೆಯಲ್ಲಿ ನಡೆಯುವ ಕಾರ್ಯಕ್ರವiವಾಗಿದ್ದು, ಆ ದಿನ ಪತಿ ಮನೆಯ ಸ್ತಿçÃಯರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ವಿಶೇಷ ಭೋಜನ ಕೂಟವನ್ನೂ ಏರ್ಪಡಿಸಲಾಗುತ್ತದೆ. ಬಳಿಕ ಹೊಸ ಬಟ್ಟೆ ತೊಡಿಸಿ ಗಂಡನ ಮನೆಗೆ ಕರೆದೊಯ್ಯುತ್ತಾರೆ. ಈ ನಲ್ವತ್ತು ದಿನಗಳ ಕಾಲ ತಾಯಿ ಮತ್ತು ಮಗುವನ್ನು ಸೂಲಗಿತ್ತಿ ಉಪಚರಿಸುತ್ತಾಳೆ. ಇದಕ್ಕೆ ಬ್ಯಾರಿ ಭಾಷೆಯಲ್ಲಿ `ಪೇತ್ ನೋಕುರೆ’ ಎನ್ನುತ್ತಾರೆ. ಉಪಚರಿಸುವ ಈ ಸೂಲಗಿತ್ತಿಗೆ ಹಣ, ಆಹಾರ ಸಾಮಗ್ರಿ, ಕುಪ್ಪಾಯ, ರುಮಾಲ್ ಇತ್ಯಾದಿ ಬಟ್ಟೆಬರೆಯನ್ನು ನೀಡುತ್ತಾರೆ. - ಕಾದ್ ಕುತ್ತುರೆ ಮಙÂ್ಙಲ : ಹೆಣ್ಣುಮಗುವಿಗೆ ಆರೇಳು ತಿಂಗಳಲ್ಲಿ ಅಥವಾ ಒಂದೆರೆಡು ವರ್ಷ ಪ್ರಾಯದಲ್ಲಿ ಮೊದಲ ಬಾರಿಗೆ ಕಿವಿ ಚುಚ್ಚಲಾಗುತ್ತದೆ. ಇದನ್ನು ತುಳುನಾಡಿನ ಆಚಾರಿ ಬಂದು ಮಾಡುತ್ತಾರೆ. ಇವರಿಗೆ
ಕಾದ್ ಕುತ್ತುರೆ ಆಚಾರಿ' ಎನ್ನಲಾಗುತ್ತದೆ. ಆ ದಿನವೂ ವಿಶೇಷ ಸಂಭ್ರಮವಿರುತ್ತದೆ. ಹಾಗಾಗಿ ಇದಕ್ಕೆ
ಕಾದ್ ಕುತ್ತುರೆ ಮಙÂ್ಙಲ’ ಎನ್ನುತ್ತಾರೆ. ಕಿವಿಗೆ ಬ್ಯಾರಿಗಳುಕಾದ್ ಅಥವಾ ಕಾವು' ಎನ್ನುತ್ತಾರೆ. ಹಾಗಾಗಿ ಆ ಬ್ಯಾರಿಗಳು ಇದನ್ನು
ಕಾದ್ ಕುತ್ತುರೆ ಅಥವಾ ಕಾವ್ ಕುತ್ತುರೆ ಮಙÂ್ಙಲ’ ಎನ್ನುತ್ತಾರೆ.
ಹೆಣ್ಣು ಮಗುವಿನ ಕಿವಿಯ ಮೇಲ್ಭಾಗದಲ್ಲಿ ಕೇವಲ ಕಿಟ್ಟಿ'ಗೆ ತಕ್ಕಷ್ಟು ಸಣ್ಣ ಐದಾರು ರಂಧ್ರಗಳನ್ನು ಮಾಡಿ ಚಿನ್ನ ಅಥವಾ ಬೆಳ್ಳಿಯ ಸರಿಗೆಯನ್ನು ಹಾಕಲಾಗುತ್ತದೆ. ಮುಂದೆ ಹೆಣ್ಣು ಪ್ರೌಢಾವಸ್ಥೆ ತಲುಪಿದಾಗ ಸರಿಗೆಯನ್ನು ತೆಗೆದು ಪವಿತ್ರ ಎಂದು ಬಗೆಯಲಾಗಿರುವ
ಅಲಿಖಾತು’ ಎಂಬ ವಿಶೇಷ ಆಭರಣವನ್ನು ತೊಡಲಾಗುತ್ತದೆ. ಬ್ಯಾರಿ ಮಹಿಳೆಯರು ಆಭರಣ ಪ್ರಿಯರು. ಮೊದಲ ಬಾರಿಗೆ ಚಿನ್ನಾಭರಣ ತೊಡುವ ಕಾರಣ ಆ ದಿನದಲ್ಲಿ ಹಾಡುವುದು, ಕುಣಿಯುವುದು, ಹೊಟ್ಟೆ ತುಂಬಾ ತಿಂದುAಡು ಸಂತೋಷ ಪಡುವುದು ಸಾಮಾನ್ಯವಾಗಿತ್ತು. ಆದರೆ ಇಂದು ಅಲಿಖಾತು ತನ್ನ ಮೌಲ್ಯ ಕಳಕೊಂಡಿದೆ. ಅಷ್ಟೇ ಅಲ್ಲ ಹೆಣ್ಮಕ್ಕಳ ಕಿವಿಯ ಮೇಲ್ಬಾಗದಲ್ಲಿ ರಂಧ್ರಗಳನ್ನು ಮಾಡುವುದನ್ನು ನಿಲ್ಲಿಸಲಾಗಿದೆ. ಇಂತಹ ವಿಶೇಷ ಕಟ್ಟುಪಾಡು ಬ್ಯಾರಿಗಳಿಂದ ದೂರವಾಗುತ್ತಿದ್ದರೂ ಚಿನ್ನಾಭರಣ ಧರಿಸುವುದರಿಂದ ದೂರ ಸರಿದಿಲ್ಲ.
- ಕುಟ್ಟಿಬೈಲ್ : ಬ್ಯಾರಿಗಳು ತಮ್ಮ ಮನೆ, ಅಂಗಡಿ ಇತ್ಯಾದಿಯನ್ನು ಕಟ್ಟುವ ಮೊದಲು
ಕುಟ್ಟಿಬೈಲ್' ಹೊಡೆಸುತ್ತಾರೆ. ಅಂದರೆ ಮನೆ ಅಥವಾ ಇನ್ನಿತರ ಕಟ್ಟಡಗಳನ್ನು ಕಟ್ಟುವ ಜಾಗದಲ್ಲಿ
ಪಾಲ್ ಕುಟ್ಟಿ’ (ಸೊಣೆ ಬರುವ ಕುಟ್ಟಿ)ಯನ್ನು ಹೊಡೆಯಲಾಗುತ್ತದೆ. ಇದಕ್ಕೆ ಮಸೀದಿಯ ಖತೀಬ್ ಅಥವಾ ಇಮಾಮ್ ಅಥವಾ ಮುಕ್ರಿಕ ದಿನ ಗೊತ್ತುಪಡಿಸಿ ಸುಬಹ್ ಬಾಂಗ್‌ನ ಬಳಿಕ ಅಂದರೆ ಮುಂಜಾನೆಯ ಹೊತ್ತು ಹೊಡೆಯುತ್ತಾರೆ. ಬಳಿಕ ಯಾಸೀನ್ ಪಠಿಸಿ ದುಆ ಮಾಡುತ್ತಾರೆ. ನಂತರ ನಾಷ್ಟ (ಬೆಳಗ್ಗಿನ ಉಪಹಾರ)ದ ವ್ಯವಸ್ಥೆ ಮಾಡಲಾಗುತ್ತದೆ.ಕುಟ್ಟಿಬೈಲ್' (ಶಂಕುಸ್ಥಾಪನೆ)ಗೆ ಬ್ಯಾರಿಗಳು ವಿಶೇಷ ಮಹತ್ವ ನೀಡುತ್ತಾರೆ. ಇದನ್ನು ಒಂದು ಧಾರ್ಮಿಕ ವಿಧಿಯನ್ನಾಗಿ ರೂಢಿಸಿಕೊಂಡಿದ್ದಾರೆ. ಬಹುಶ:
ಕುಟ್ಟಿಬೈಲ್’ ಎಂಬ ಹೆಸರು ಕನ್ನಡದ ಬಯಲು (ಬೈಲ್) ಮತ್ತು ಗುಂಟ (ಕುಟ್ಟಿ)ದಿಂದ ಬಂದಿರಬಹುದು. ಒಂದು ಸೀಮಿತ ಪ್ರದೇಶವನ್ನು ಕುಟ್ಟಿ ಹೊಡೆದು ಗುರುತಿಸುವ ಕ್ರಮಕ್ಕೆ ಕುಟ್ಟಿಬೈಲ್ ಎನ್ನಲಾಗುತ್ತದೆ. ಈ ಸಂದರ್ಭ ಹಗ್ಗವನ್ನೂ ಬಳಸಲಾಗುತ್ತದೆ. ಬ್ಯಾರಿ ಭಾಷೆಯಲ್ಲಿ ಹಗ್ಗಕ್ಕೆ ಬಲ್ಲಿ ಎನ್ನುತ್ತಾರೆ. ಹಾಗಾಗಿ ಕೆಲವು ಕಡೆ `ಕುಟ್ಟಿಬಲ್ಲಿ’ ಎಂದೂ ಕರೆಯುತ್ತಾರೆ. - ಅವ ಅಥವಾ ಅಗ ಒಕ್ಕೊಲು : ಬ್ಯಾರಿಗಳ
ಅವ ಅಥವಾ ಅಗ ಒಕ್ಕೊಲು' (ಗೃಹಪ್ರವೇಶ) ಕ್ರಮ ವೈಶಿಷ್ಟö್ಯತೆಯಿಂದ ಕೂಡಿದೆ. ಅಂದರೆ ಸುಬಹ್ ಬಾಂಗ್‌ಗೆ ಕೆಲವೇ ನಿಮಿಷಕ್ಕೆ ಮುನ್ನ ಮಸೀದಿಯ ಖತೀಬ್/ಇಮಾಮ್/ಮುಕ್ರಿಕ ಅಥವಾ ಕುಟುಂಬದ ಹಿರಿಯ ವ್ಯಕ್ತಿ
ಬಿಸ್ಮಿ’ ಉಚ್ಚರಿಸಿ ಮನೆಯ ಬಾಗಿಲನ್ನು ತೆರೆದು ಬಲಗಾಲಿಡುತ್ತಾರೆ. ಅವರ ಹಿಂದೆ ಇತರರೂ ಕಾಲಿಡುತ್ತಾರೆ. ಹಾಗೇ ಒಳ ಪ್ರವೇಶಿಸುವಾಗ ಒಬ್ಬೊಬ್ಬರು ಒಂದೊAದು ಆಹಾರ ಸಾಮಗ್ರಿಗಳನ್ನು ಒಳಗೆ ಕೊಂಡೊಯ್ಯುತ್ತಾರೆ. ಮೊದಲು ಮನೆಯ ಯಜಮಾನ ಅಥವಾ ಕುಟುಂಬದ ಮುಖ್ಯಸ್ಥ ಅಕ್ಕಿಮುಡಿಯನ್ನು ಮನೆಯೊಳಗೆ ಇಡುತ್ತಾರೆ. ಇತ್ತ ಮಸೀದಿಯ ಖತೀಬ್/ಇಮಾಮ್/ಮುಕ್ರಿಕ ಸುಬಹ್ ಬಾಂಗ್‌ನ ಕರೆ ಕೊಡುತ್ತಾರೆ. ನಂತರ ಎಲ್ಲರೂ ಮನೆಯಲ್ಲೇ ಸಾಮೂಹಿಕ ನಮಾಝ್ ಮಾಡುತ್ತಾರೆ. ಅಷ್ಟರಲ್ಲಿ ಕುಟುಂಬದ ಹಿರಿಯಾಕೆ ಅಥವಾ ಮನೆಯ ಯಜಮಾನಿ ಹಾಲು ಬಿಸಿ ಮಾಡಿ ಎಲ್ಲರಿಗೂ ಕೊಡುತ್ತಾರೆ. ಮಸೀದಿಯ ಇಮಾಮರು ಯಾಸೀನ್ ಪಠಿಸಿ ವಿಶೇಷ ದುಆ ಮಾಡುತ್ತಾರೆ. ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡುತ್ತಾರೆ. ಈ ಸಂದರ್ಭ ಆಚರಿಸುವ ಕೆಲವು ಕಟ್ಟುಪಾಡುಗಳು ತುಳುವರಿಂದಲೂ ಪ್ರಭಾವಿತಗೊಂಡಿರುವುದು ಕಂಡು ಬರುತ್ತದೆ. ಅದರಲ್ಲಿ ಒಲೆಯ ಮೇಲಿಟ್ಟ ಹಾಲು ಬಿಸಿಯಾಗಿ, ಕುದಿದು ಹೊರಗೆ ಚೆಲ್ಲಲ್ಪಡಬೇಕು ಎಂಬುದೂ ಒಂದು. ಆದರೆ ಇದನ್ನು ಇಸ್ಲಾಂ ಧರ್ಮ ಅನಗತ್ಯವಾಗಿ ಯಾವುದೇ ವಸ್ತುವನ್ನು ದುರ್ಬಳಕೆ ಮಾಡುವುದನ್ನು ಸಮ್ಮತಿಸುವುದಿಲ್ಲ. - ಸುನ್ನತ್ ಮಙÂ್ಙಲ : ಎಳೆಯ ಹೆಣ್ಮಕ್ಕಳಿಗೆ
ಕಾದ್ ಕುತ್ತುರೆ ಮಙÂ್ಙಲ' ಮಾಡಿದಂತೆ ಎಳೆಯ ಗಂಡು ಮಕ್ಕಳಿಗೆ
ಸುನ್ನತ್ ಮಙÂ್ಙಲ’ವನ್ನೂ ಮಾಡಲಾಗುತ್ತದೆ. ಇದು ಇಸ್ಲಾಮಿ ಕರ್ಮಶಾಸ್ತçವೂ ಆಗಿದ್ದು, ಬಡವ-ಬಲ್ಲಿದ ಎಂಬ ಬೇಧವಿಲ್ಲದೆ ಎಲ್ಲ ಗಂಡು ಮಕ್ಕಳಿಗೂ ಸುನ್ನತ್ ಮಾಡುವುದು ಕಡ್ಡಾಯ. ಆವಾಗ ಮದುವೆಯ ಸಡಗರವೇ ಕಂಡು ಬರುತ್ತದೆ. ಹಾಗಾಗಿ ಇದಕ್ಕೆಸುನ್ನತ್ ಮಙÂ್ಙಲ' (ಮುಂಜಿ ಮದುವೆ) ಎನ್ನುತ್ತಾರೆ. ಸಾಮಾನ್ಯವಾಗಿ ಗಂಡು ಮಕ್ಕಳಿಗೆ ಏಳು ವರ್ಷ ಪ್ರಾಯ ತುಂಬಿದಾಗ
ವಸ/ವಸನ್/ವತ್ಸ’ನಿಂದ (ಮುಸ್ಲಿಂ ಸಮುದಾಯದ ಕ್ಷೌರಿಕ) ಶಿಶ್ನದ ಮುಂದೊಗಲನ್ನು ಕತ್ತರಿಸಲಾಗುತ್ತದೆ. ಸಾಮಾನ್ಯವಾಗಿ ಆ ದಿನ ಬೆಳಗ್ಗೆಯೇ ಒಂದೆರೆಡು ಮುಡಿ ಅಕ್ಕಿಯ ಮೇಲೆ ಹುಡುಗನನ್ನು ಕೂರಿಸಿ ಬಳಿಕ ಆತನ ಮುಖವನ್ನು ಬಲಭಾಗಕ್ಕೆ ತಿರುಗಿಸಲಾಗುತ್ತದೆ. ಬಳಿಕ ವಸ `ಅಲ್ಲಾಹು ಅಕ್ಬರ್’ ಎನ್ನುತ್ತಾ ಮುಂಜಿ ಮಾಡುತ್ತಾನೆ. ಬಳಿಕ ಆ ಹುಣ್ಣಿಗೆ ಬ್ಯಾಂಡೇಜ್ ಕಟ್ಟಲಾಗುತ್ತದೆ. ಶಿಶ್ನದ ಮುಂದೊಗಲ ಚರ್ಮವನ್ನು ಬೂದಿಯಲ್ಲಿ ಬೆರೆಸಿ ತೆಂಗಿನ ಮರದ ಬುಡದಲ್ಲಿ ಹೂತು ಹಾಕಲಾಗುತ್ತದೆ.
ಸುನ್ನತ್ (ಮುಂಜಿ)ಗೊಳಗಾದ ಹುಡುಗನ ಹುಣ್ಣಿಗೆ ಗಡುಸಾದ ಬಟ್ಟೆಬರೆ ತಾಗದಂತೆ ತೆಳುವಾದ ಬಿಳಿ ವಸ್ತçವನ್ನು ಸೊಂಟಕ್ಕೆ ಸುತ್ತಿ ಆತನ ಕತ್ತಿಗೆ ಕಟ್ಟಲಾಗುತ್ತದೆ. ಆತ ಮರ‍್ನಾಲ್ಕು ದಿನಗಳ ಕಾಲ ಚಾಪೆಯಲ್ಲೇ ಮಲಗಿರುತ್ತಾನೆ. ಆವಾಗ ಆತನನ್ನು ನೋಡಲು ನೆರೆಕರೆಯವರು, ಸಂಬAಧಿಕರು ಬರುತ್ತಾರೆ. ಹಾಗೇ ಬರುವಾಗ ರೊಟ್ಟಿ, ಮಾಂಸದ ಪದಾರ್ಥವನ್ನೂ ತರುವುದುಂಟು. ಮರಳಿ ಹೋಗುವಾಗ ಆತನ ಕೈಗೆ ಕವರ್ (ಹಣ) ಕಾಣಿಕೆಯಾಗಿ ಕೊಡುತ್ತಾರೆ. ಹಿಂದೆ ಸುನ್ನತ್ ಮಂಙÂಲವು ಸಾಮಾನ್ಯವಾಗಿ ಮೂರರಿಂದ ಏಳು ದಿವಸಗಳ ತನಕ ಭರ್ಜರಿಯಾಗಿ ನಡೆಯುತ್ತಿತ್ತು. ರಾತ್ರಿ ಹೊತ್ತು ಹಾಡು ಹಾಡಿ ಅರ್ಥ ಹೇಳಿಸುವ ಕ್ರಮವೂ ಇತ್ತು. ಸುನ್ನತ್‌ಗೊಳಗಾದ ಹುಡುಗನನ್ನು ಸುನ್ನತ್ ಪುದಿಯಾಪ್ಲೆ' (ಮುಂಜಿಯ ಮದುಮಗ)ಯ ಹುಣ್ಣನ್ನು ಮೂರು, ಐದು, ಏಳು, ಒಂಭತ್ತು, ಹೀಗೆ ಬೆಸ ಸಂಖ್ಯೆಯಲ್ಲಿ ಅದು ಒಣಗುವ ತನಕ ಶುಚಿಗೊಳಿಸಲಾಗುತ್ತದೆ. ಮುಂಜಿಯ ಮದುಮಗನ ಆರೋಗ್ಯದ ಹಿತದೃಷ್ಟಿಯಿಂದ ಕುಡಿಯಲು ಬಿಸಿನೀರು, ಕಪ್ಪು ಕಡ್ಲೆಯ ಪದಾರ್ಥ, ರೊಟ್ಟಿ, ನಾಟಿ ಕೋಳಿ ಸಾರು ನೀಡುತ್ತಾರೆ. ಮೂರನೆ ದಿನದಂದು ಮೊದಲ ಬಾರಿಗೆ ಶುಚಿಗೊಳಿಸುವ ಕಾರಣ ವಿಶೇಷ ಔತಣ ಏರ್ಪಡಿಸಲಾಗುತ್ತದೆ. ಕೆಲವೊಮ್ಮೆ ಹುಣ್ಣು ಒಣಗಲು ಮೂರು ಅಥವಾ ನಾಲ್ಕು ತಿಂಗಳವರೆಗೂ ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಸುನ್ನತ್ ಮಙÂ್ಙಲವನ್ನು ರಮಝಾನ್ ತಿಂಗಳಲ್ಲಿ ಮಾಡುತ್ತಾರೆ. ಮುಂಜಿಗೊಳಗಾದ ಹುಡುಗನ ಹುಣ್ಣು ಒಣಗಿದ ಬಳಿಕ ಪೆರ್ನಾಲ್ ಹಬ್ಬದಂದು ಮಸೀದಿಗೆ ಕರೆದುಕೊಂಡು ಹೋಗಲಾಗುತ್ತದೆ. ಉಳಿದಂತೆ ಸಾಮಾನ್ಯವಾಗಿ ಶುಕ್ರವಾರ ಮಸೀದಿಗೆ ಕರೆದುಕೊಂಡು ಹೋಗಲಾಗುತ್ತದೆ. ಇದಕ್ಕೆ
ಸುನ್ನತ್ ಪುದಿಯಾಂಪುಲೆ ಪಳ್ಳಿಗ್ ಪೋಂಡೆ’ ಎನ್ನುತ್ತಾರೆ. ಹೀಗೆ ಮಸೀದಿಗೆ ಹೋಗುವಾಗ ಆತನ ಗೆಳೆಯರು, ಕುಟುಂಬದ ಹಿರಿಯ ಸದಸ್ಯರು ಕೂಡ ಜತೆಗೂಡುತ್ತಾರೆ. ಆವಾಗ ಹಾಡು ಹಾಡಿ, ಬೆಡಿ ಮದ್ದುಗಳಿಂದ ಮಸೀದಿಯ ಕೊಳಕ್ಕೆ ಸ್ನಾನಕ್ಕೆ ಕರೆದೊಯ್ದು ಮದುಮಗನಂತೆ ಸಿಂಗರಿಸಿ ಮೆರವಣಿಗೆಯಲ್ಲಿ ಮತ್ತೆ ಮನೆಗೆ ಕರೆತರುವ ಪರಿಪಾಠವೂ ಪ್ರಾಚೀನ ಬ್ಯಾರಿಗಳಲ್ಲಿತ್ತು. ಮಸೀದಿಯಿಂದ ಮರಳಿ ಬಂದು ವಿಶೇಷ ಔತಣ ಕೂಟದಲ್ಲಿ ಭಾಗಿಯಾಗುತ್ತಾರೆ. ಹಿಂದೆ ಶ್ರೀಮಂತರ ಮಕ್ಕಳನ್ನು ಕುದುರೆಯ ಬೆನ್ನೇರಿ ಕೂತು ಅಥವಾ ಜಟಕಾ ಬಂಡಿಯಲ್ಲಿ ಕುಳಿತು ಪಳ್ಳಿಗೆ ಕರೆದೊಯ್ಯಲಾಗುತ್ತಿತ್ತು. ಇದು ಸುನ್ನತ್ ಪುದಿಯಾಪ್ಲೆ ಪಳ್ಳಿಗ್ ಪೋಂಡೆ' ಪದ್ಧತಿಯ ಮಹತ್ವವನ್ನು ಸಾರುತ್ತದೆ. ಆದರೆ ಈಗ
ವಸ’ ಸ್ಥಾನವನ್ನು ನಗರದ ವೈದ್ಯರು ತುಂಬಿದ್ದಾರೆ. ಏಳು ವರ್ಷ ಪ್ರಾಯ ತುಂಬುವುದನ್ನು ಕಾಯದೆ ಹುಟ್ಟಿದ ತಕ್ಷಣ ಅಥವಾ ಮರುದಿನ ಮುಂಜಿ ಮಾಡುತ್ತಾರೆ.
- ಅತಿಥಿ ಸತ್ಕಾರ : ಬ್ಯಾರಿಗಳು ಮನೆಗೆ ಬಂದ ಅತಿಥಿಗಳನ್ನು ಆದರವಾಗಿ ಎದುರುಗೊಂಡು ಉಪಚರಿಸುತ್ತಾ, ಅವರು ನಿರ್ಗಮಿಸುವಾಗ ಅವರ ಹಿಂದೆಯೇ ಕಾಲೆಳೆದು ಬೀಳ್ಕೊಡುತ್ತಾ, ತಮ್ಮವರಿಗೆ `ಸಲಾಂ’ (ಅಸ್ಸಲಾಂ ಅಲೈಕುಂ) ಹೇಳಿ ಕಳುಹಿಸುತ್ತಾ, ಸೌಹಾರ್ದ, ಭಾತೃತ್ವ ಬೆಳೆಸುತ್ತಿರುವುದು ಕಂಡು ಬರುತ್ತದೆ.
- ಉಡುಪು : ಬ್ಯಾರಿಗಳ ಉಡುಪು ತನ್ನದೇ ಆದ ವೈಶಿಷ್ಟö್ಯತೆಯನ್ನು ಹೊಂದಿದೆ. ಅದು ಇತರ ಜನಾಂಗೀಯರನ್ನು ತಮ್ಮತ್ತ ಗಮನಿಸುವಂತೆ ಮಾಡುತ್ತದೆ. ಪ್ರಾಚೀನ ಬ್ಯಾರಿ ಸ್ತಿçÃಯರು ಕಪ್ಪು ಬಣ್ಣದ ಬುರ್ಖಾದ ಬದಲು ಕೆಂಪು ಅಥವಾ ಕಾವಿ ಬಣ್ಣದ ಹಾಗು ಬಿಳಿ ಮತ್ತು ಕಪ್ಪು ಪಟ್ಟೆಗಳಿದ್ದ
ವಲ್ಲಿ' ಎಂಬ ಬಟ್ಟೆಯನ್ನು ಬರೀ ಕಣ್ಣುಗಳು ಮಾತ್ರ ಕಾಣುವ ಹಾಗೆ ಧರಿಸುತ್ತಿದ್ದರು. ಇಬ್ಬರು ಜತೆಗೂಡಿ ಹೊರ ಹೋಗುವಾಗ ದೊಡ್ಡ ಗಾತ್ರದ
ಜೋಡುವಲ್ಲಿ’ ಎಂಬ ವಸ್ತçವನ್ನು ಹೊದೆಯುತ್ತಿದ್ದರು. ಬಡವರು, ಕೆಳವರ್ಗದವರು `ಒಡ್ಡಿವಲ್ಲಿ’ ಎಂಬ ಸಾಧಾರಣ ದರ್ಜೆಯ ಬಟ್ಟೆಯನ್ನು ಧರಿಸುತ್ತಿದ್ದರು. ಕ್ರಮೇಣ ವಲ್ಲಿ ಮಾಯವಾಗಿ ಕಪ್ಪು ಬಣ್ಣದ ಬುರ್ಖಾ ಆಚರಣೆಗೆ ಬಂತು. ಈಗ ಶಾಲ್ ಬುರ್ಖಾ ಕಂಡು ಬಂದಿದೆ. ಜತೆಗೆ ನವನವೀನ ವಿನ್ಯಾಸ ಹಾಗು ನೀಲಿ, ಹಸಿರು, ಕಂದು ಬಣ್ಣದ ಬುರ್ಖಾ ಕಂಡು ಬಂದಿದೆ.
ಬ್ಯಾರಿ ಸ್ತಿçÃಯರು ಮದುವೆ ಮತ್ತಿತರ ಸಮಾರಂಭಗಳಿಗೆ ಕಿನ್ಕಾಪು, ಬಂಡ್ರಾಸ್ (ಬನಾರಸ್) ಸೀರೆ ತೊಡುತ್ತಿದ್ದರೆ, ನೆಟ್ಟಿಗೆ (ಗದ್ದೆ ಕೆಲಸ) ಹೋಗುವಾಗ ದಪ್ಪ ನೂಲಿನ ಹಸಿರು ಬಣ್ಣದ ಸೀರೆ ಉಡುತ್ತಿದ್ದರು. ನಮಾಝ್ ಮಾಡುವಾಗ ಬುರ್ಖಾವನ್ನು ಹೋಲುವ ಜುಬ್ಬ-ಮಕ್ಕನೆ' ಎಂಬ ಬಿಳಿ ವಸ್ತç ಬಳಸಿದರೆ, ಮನೆಯಲ್ಲಿರುವಾಗ ಅಥವಾ ಹೊರಗೆ ಹೋಗುವಾಗ ತಲೆಗೆ ಉರ್ಮಾಲ್ ಅಥವಾ ಎಲ್‌ಸರ ಎಂಬ ವಸ್ತç ಕಟ್ಟುತ್ತಾರೆ. ಶ್ರೀಮಂತ ಬ್ಯಾರಿ ಸ್ತಿçÃಯರು
ಪಟ್ಟ್ ಉರ್ಮಾಲ್’ ಅಥವಾ ಪಟ್ಟ್ ಎಲ್ಸರ' ಧರಿಸುತ್ತಿದ್ದರು. ಮಾಪಿಳ್ಳೆ ಸ್ತಿçÃಯರಂತೆ ಬ್ಯಾರಿ ಸ್ತಿçÃಯರು ಕೂಡ
ಬೆಲ್ತೆ ಕುಪ್ಪಾಯ’ (ಬಿಳಿ ಕುಪ್ಪಸ) ಧರಿಸುತ್ತಾರೆ. ಪ್ರಾಚೀನ ಬ್ಯಾರಿ ಸ್ತಿçÃಯರು ಬುಟ್ಟೆ ಕುಪ್ಪಾಯ' ಎಂಬ ತೆಳು ಹಾಗು ಸಡಿಲವಾದ ಅಂಗಿಯAತಹ ಉಡುಗೆಯನ್ನು ತೊಡುತ್ತಾರೆ. ಬ್ಯಾರಿ ಹೆಂಗಸರು
ಅರ್ಗಂಟಿ ಕುಪ್ಪಾಯ’, ಕಲ್ಬಾರೆ' ಎಂಬ ಹಳದಿ ಸೀರೆ,
ಪೊಡಿಕಲ’ ಎಂಬ ಕೆಂಪು ಸೀರೆ, ವೊಲ್ಲಿ, ಜೋಡುವೊಲ್ಲಿ, ಪಟ್ಟ್ವೊಲ್ಲಿ, ಮಞ್ಞಲ್‌ವೊಲ್ಲಿ, ಎಲ್‌ಸರ, ಉರ್ಮಾಲ್ ಧರಿಸುತ್ತಿದ್ದರು. ಬ್ಯಾರಿ ಹೆಣ್ಮಕ್ಕಳು ಲಂಗ-ರವಕೆ ಧರಿಸುತ್ತಿದ್ದರು. ಈಗ ಚೂಡಿದಾರ್, ನೈಟಿ, ಮಿಡಿ ಇತ್ಯಾದಿ ಬಟ್ಟೆಬರೆ ಕಂಡು ಬರುತ್ತದೆ.
ಬ್ಯಾರಿ ಗಂಡಸರು ಬಿಳಿ ಬಣ್ಣದ ಚಟ್ಟೆ-ಮುಂಡು' (ಅಂಗಿ-ಲುAಗಿ) ಹಾಗು ತಲೆಗೆ ಬಿಳಿ ಮುಂಡಾಸು ತೊಡುತ್ತಿದ್ದರು. ಅದಲ್ಲದೆ ಸೊಂಟಕ್ಕೆ ಹಸಿರು ಬಣ್ಣದ ರಾಣಿ ಮಾರ್ಕಿನ ಬೆಲ್ಟ್ ಕಟ್ಟುತ್ತಿದ್ದರು. ಹಿಂದೆ ಬ್ಯಾರಿ ಗಂಡಸರು ತಾಮ್ರದ ಎರಡು ಗುಂಡಿಯ ನಡುವೆ ನೂಲು ಇರುವ ಪೈರಾನಿಯಂತಹ ಬಟ್ಟೆ ಧರಿಸುತ್ತಿದ್ದು, ಇದಕ್ಕೆ
ಬಂಡಿ’ ಎನ್ನುವರು. ಬ್ಯಾರಿ ಗಂಡು ಮಕ್ಕಳು ಇಜಾರ್ (ಚಡ್ಡಿ)ಯನ್ನು ಧರಿಸಿದರೆ ಬ್ಯಾರಿ ಪುರುಷರು ಬಿಳಿ ಅಥವಾ ಅಡ್ಡಗೀಟಿನ ಬಣ್ಣ ಬಣ್ಣದ ಮುಂಡು/ತುನಿ/ಕAಬಯಿ (ಲುಂಗಿ) ಹಾಗು ಚಟ್ಟೆ (ಅಂಗಿ)AiÀiನ್ನು ತೊಡುತ್ತಿದ್ದರು. ಹೆಚ್ಚಾಗಿ ಲುಂಗಿಯ ಕಚ್ಚ' ಕಟ್ಟುತ್ತಾರೆ. ಕತ್ತಿನ ಹಿಂಬದಿಗೆ
ತೂವಾಲ್’ ಸಿಕ್ಕಿಸುತ್ತಾರೆ. ಕೆಲವರು ತೆಳುವಾದ ಉದ್ದದ ತಟ್ಟ' (ಬೈರಾಸ್) ಕಟ್ಟುತ್ತಾರೆ. ಅರ್ಧ ತೋಳಿನ
ಗಂಜಿಬುರಾಕ್’ (ಬನಿಯನ್) ತೊಡುವುದು ಕೂಡ ಸಾಮಾನ್ಯವಾಗಿ ಕಂಡು ಬರುತ್ತದೆ. ಪ್ರಾಚೀನ ಬ್ಯಾರಿ ಸ್ತಿçÃ-ಪುರುಷರು `ಮೆದ್ಕಡಿ’ ಎಂಬ ಮರದ ಪಾದರಕ್ಷೆಯನ್ನು ಧರಿಸುತ್ತಿದ್ದರು. ಹೊರಗೆ ಹೋಗುವಾಗ ಅದರಲ್ಲೂ ಹಜ್ ಯಾತ್ರೆಗೆ ಹೋಗುವವರು ಇದನ್ನೇ ಹಾಕುತ್ತಿದ್ದರು.
- ಆಹಾರ ಪದ್ಧತಿ : ಬ್ಯಾರಿಗಳ ಆಹಾರ ಕ್ರಮ ವೈವಿಧ್ಯತೆ ಹಾಗು ಸರಳತೆಯಿಂದ ಕೂಡಿದೆ. ಹಂದಿ ಮತ್ತು ಶೇಂದಿ ವ್ಯಾಪಾರ ಹೊರತುಪಡಿಸಿ ಉಳಿದಂತೆ ಇಸ್ಲಾಂ ಧರ್ಮ ಅನುಮತಿಸಿದ ಎಲ್ಲಾ ರೀತಿಯ ವ್ಯಾಪಾರ, ಉದ್ದಿಮೆ, ಕೂಲಿ ಕೆಲಸ ಮಾತ್ರವಲ್ಲ ಮೀನುಗಾರಿಕೆ, ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಅಂದರೆ ಕೃಷಿಯಲ್ಲಿ ಆಸಕ್ತಿಯಿಂದ ತೊಡಗಿಸಿರುವ ಬ್ಯಾರಿಗಳು ತುಳುನಾಡಿನ ಸಂಪ್ರದಾಯದAತೆ
ಸುಗ್ಗಿ'ಯ ಕಾಲದಲ್ಲಿ ಬೆಳೆದ ಹೊಸ ಅಕ್ಕಿಯನ್ನು ಕನಿಷ್ಠ ಪಕ್ಷ ನಲ್ವತ್ತು ಮಕ್ಕಳಿಗೆ ಕೊಡುತ್ತಿದ್ದರು. ಇದಕ್ಕೆ
ಪುದಿಯೆ ಅರಿರೆ ಚೋರು’ (ಹೊಸ ಅಕ್ಕಿಯ ಊಟ) ಎಂದು ಕರೆಯುತ್ತಾರೆ. ಹಿರಿಯ ಕೃಷಿಕರ ಮನೆಯಲ್ಲಿ ನಡೆಯುತ್ತಿದ್ದ ಇಂತಹ ಕಾರ್ಯಕ್ರಮಕ್ಕೆ ಊರಿನ ಎಳೆಯ ಮಕ್ಕಳಿಗೆ ಕರೆ ಹೋಗುತ್ತಿತ್ತು. ಇದನ್ನು ಕೇವಲ ಮಕ್ಕಳಿಗೆ ಮಾತ್ರ ಕೊಡುವ ಕ್ರಮ. ಹಾಗಾಗಿ ಇದಕ್ಕೆಮಕ್ಕಲೆ ಕಞÂ್ಞ' (ಮಕ್ಕಳ ಗಂಜಿ) ಎನ್ನುತ್ತಿದ್ದರು. ಈ ಗಂಜಿಗೆ ಹೆಚ್ಚು ಪ್ರಮಾಣದಲ್ಲಿ
ಬೆಲ್ಲ’ ಬೆರೆಸುತ್ತಿದ್ದ ಕಾರಣ ಇದಕ್ಕೆಚಕ್ಕರೆಕಞÂ್ಞ' (ಬೆಲ್ಲದ ಗಂಜಿ) ಎಂದೂ ಕರೆಯುತ್ತಾರೆ. ಈಗ ಈ
ಮಕ್ಕಲೆ ಕಞÂ್ಞ’ಯನ್ನು ಕೃಷಿಕರ ಮನೆಯಲ್ಲಿ ಕೊಡುವ ಬದಲು ಮದ್ರಸಕ್ಕೆ ಕಳುಹಿಸಿಕೊಟ್ಟು ಅಲ್ಲಿ ಎಲ್ಲಾ ಮಕ್ಕಳು ಜತೆಯಾಗಿ ತಿನ್ನುವಂತೆ ಮಾಡುತ್ತಾರೆ. ಅಲ್ಲದೆ ವಿಶೇಷ ದುಆ ಮಾಡಿಸುತ್ತಾರೆ. ತನ್ಮಧ್ಯೆ ಅನಾರೋಗ್ಯ ಅಥವಾ ಕಷ್ಟಗಳು ಎದುರಾದಾಗ ಇಟ್ಟ ಹರಕೆ ಸಂದಾಯ ಮಾಡಲು ಕೂಡಚಕ್ಕರೆ ಕಞÂ್ಞ'ಯನ್ನು ಬಳಸುತ್ತಾರೆ. ಕೆಲವು ಕಡೆ ಇದನ್ನು ವಿಶೇಷ ಸಡಗರ ಮತ್ತು ಸಂಭ್ರಮ ಹಾಗು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ಅಂದರೆ ಹೊಸ ಬೆಳೆಯ ಭತ್ತದ ಅಕ್ಕಿಯನ್ನು ಮನೆಯೊಳಗಿಡುವ ಮುಂಚೆ
ಹೊಸತು ಉಣ್ಣುವ ಹಬ್ಬ’ ಎನ್ನುತ್ತಾರೆ.
ನದಿಯ ನೀರು ಭರತಕ್ಕೆ ಏರುವ ಹೊತ್ತು ಮನೆಯ `ಗಂಡು ಮಗ’ ಭತ್ತದ ತೆನೆಯನ್ನು ತಲೆ ಮೇಲಿಟ್ಟು ಬಿಸ್ಮಿ ಉಚ್ಚರಿಸುತ್ತಾ ಮನೆಯ ಪಡಸಾಲೆಯ ಮೂಲಕ ಬಲಗಾಲಿಟ್ಟು ಪ್ರವೇಶಿಸುತ್ತಾ ಮಧ್ಯಭಾಗದಲ್ಲಿ ತೆನೆಯನ್ನು ಕಟ್ಟುತ್ತಾರೆ. ಅದಲ್ಲದೆ ತೆನೆಯ ಕೆಲವು ಭತ್ತವನ್ನು ಸುಲಿದು ಬೆಳೆ ಸಮೃದ್ಧಿಗಾಗಿ ವಿಶೇಷ ದುಆ ಮಾಡಲಾಗುತ್ತದೆ. ಈ ವಿಶಿಷ್ಟ ಆಚರಣೆಯ ಬಳಿಕ ಹೊಸ ಅಕ್ಕಿಯನ್ನು ಮನೆಯೊಳಗೆ ಬಳಸಲಾಗುತ್ತದೆ.
ಬ್ಯಾರಿಗಳಿಗೆ ಪೊಟ್ಟು ಚೋರು' (ಸಾಮಾನ್ಯವಾಗಿ ಸ್ಥಳೀಯ ಕುಚಲಕ್ಕಿ ಊಟ) ದಿನದ ಪ್ರಮುಖ ಆಹಾರವಾಗಿತ್ತು. ಎಲ್ಲರೂ ನೆಲದಲ್ಲಿ ಕುಳಿತು
ಸುಪ್ರ-ತಗರಿ’ ಬಳಸಿ ಊಟ ಮಾಡುತ್ತಿದ್ದರು.
ಕೆಲವರು ಕಞÂ್ಞ ಅಥವಾ ಕುಲ್ತೆಕಞÂ್ಞಯ ಜೊತೆಗೆ ತಯರ್-ಮೋರ್ (ಮೊಸರು) ಬಳಸುತ್ತಿದ್ದರು. ಅದಲ್ಲದೆ ಮಸಾಲೆ ತುಂಬಿದ ಮೀನನ್ನು ಎಣ್ಣೆಯಲ್ಲಿ ಕರಿದರೆ ಕಾಯಿಚೆದ್' ಎಂದೂ ಮಣ್ಣಿನ ಮಡಕೆಯಲ್ಲಿಟ್ಟು ಅಡಿಭಾಗಕ್ಕೆ ಒಲೆಯ ಬೆಂಕಿಯ ಕೆಂಡಗಳನ್ನು ತುಂಬಿ, ಮಡಕೆ ಮೇಲಿನ ಮುಚ್ಚಳದಲ್ಲಿ ಅಷ್ಟೇ ಪ್ರಮಾಣದ ಬೆಂಕಿ ಕೆಂಡವನ್ನು ಹಾಕಿ ಮೀನನ್ನು ಕಾಯಿಸಿದರೆ
ಬರ್ಟಿಯೆದ್’ ಎನ್ನುವರು. ಹೀಗೆ ಮಾಡಿದ ಮೀನನ್ನು ಮತ್ತೆ ಎಣ್ಣೆಯಲ್ಲಿ ಹಾಕಿ ಕರಿದರೆ ಪೊರ್ಚೆದ್' ಎನ್ನುವರು. ಅದೇ ರೀತಿ
ಮುಟ್ಟೆ ಕಾಚೆದ್’ (ಆಮ್ಲೆಟ್) ಮತ್ತು ಮುಟ್ಟೆ ಬೇಪಾಟಿಯೆದ್' (ಬ್ವಾಯಿಲ್) ಕೂಡ ಬ್ಯಾರಿಗಳ ವಿಶೇಷ ಆಹಾರವಾಗಿತ್ತು. ಇದರ ಜತೆಗೆ ಬೀಫ್ ಸುಕ್ಕ, ಮಟನ್ ಸುಕ್ಕವೂ ಕೂಡ ಬ್ಯಾರಿಗಳ ಅತಿಪ್ರಿಯ ಆಹಾರವಾಗಿತ್ತು. ಹಾಗೇ ಬಗೆ ಬಗೆಯ ಪಲ್ಯಗಳನ್ನು ತಯಾರಿಸುತ್ತಿದ್ದು, ಇದಕ್ಕೆ
ಪೊಡಿಕರಿ’ ಅಥವಾ ಬರ್ತೆಕರಿ' ಅಥವಾ
ಬರ್ತೆಕೂಟ’ ಎಂದು ಕರೆಯುತ್ತಾರೆ. ಹೆಚ್ಚಾಗಿ ಚಕ್ಕೆ ಕೂರುಡೆ ಪೊಡಿಕರಿ, ಪೊಡಿಯೆಟ್ಟಿರೆ ಚಟ್ನಿ ಸಾಮಾನ್ಯವಾಗಿತ್ತು.
ಬ್ಯಾರಿಗಳು ಊಟದ ಹೊತ್ತು ಹೊರತುಪಡಿಸಿದಂತೆ ಬಿಸೆಲಿಲ್ ಬೀತಿಯೆ ಅಪ್ಪ/ಬಿಸೆಲಿಡೆಪ್ಪ, ಕಲ್ತಪ್ಪ, ಇರ್‌ಮನೆಡೆ ಅಪ್ಪ/ಇರ್‌ಮಂಡೆಪ್ಪ/ಸೇಮೆ, ನೇವರಿ, ಪೋಲೆ, ಪೂಪೋಲೆ/ಪೂತಾಲೆ, ಪಿಂಡಿ, ತನ್ನಿ ಪಿಂಡಿ/ ತನ್ನಿ ಪಿಂಡೆ/ತನ್ನಿರೆ ಪಿಂಡಿ, ಕೌಲ್ಲೆ ಪಿಂಡಿ, ಎನ್ನೆಡೆ ಅಪ್ಪ/ಎನ್ನೆಲ್ ಬೀತಿಯೆ ಅಪ್ಪ/ಎನ್ನೆಲ್ ಕಾಚೆ ಅಪ್ಪ ದಲಿಯಪ್ಪ, ಗುಲಿಯಪ್ಪ, ಉಲಿಯಪ್ಪ, ನೈಯಪ್ಪ, ಪೂ ಅಪ್ಪ/ಪೂವಪ್ಪ, ಕಿನ್ನತಪ್ಪ, ಪಿಞನಪ್ಪ, ಚಕ್ಕೆಡೆ ಅಪ್ಪ, ಪಲತ್ತೆ ಅಪ್ಪ, ಪಲ್ತಪ್ಪ, ತೆಕ್ಕಿಡೆ ಎಲೆಡೆ ಅಪ್ಪ, ಓಡುಲು ಬೀತಿಯೆ ಅಪ್ಪ, ಚಕ್ಕೆರೆ ಅಪ್ಪ, ಮಞ್ಞಲ್ ಅಪ್ಪ, ಇಡ್ಲಿ, ಗುಲಿಯಪ್ಪ, ಪತ್ತ್ರೆ, ಕಾವಲಿಲ್ ಬೀತಿಯೆ ಅಪ್ಪ, ಬಾಲೆಡೆ ಎಲೆಲ್ ಬೀತಿಯೆ ಅಪ್ಪ, ನೈಯಪ್ಪ, ಉಂಡೆ, ಬಾನಲೆಡೆ ಅಪ್ಪ ಇತ್ಯಾದಿ ತಿಂಡಿ-ತಿನಿಸುಗಳನ್ನು ಮಾಡುತ್ತಿದ್ದರು. ವಿಶೇಷ ದಿನದಲ್ಲಿ ಬಿರಿಯಾನಿ, ದಮ್ಮು ಬಿರಿಯಾನಿ, ನೈಚೋರು, ಕುಷ್ಕ, ಕೋಳಿ ಕಾಚೆದ್, ಕೋಳಿ ಪೊರ್ಚೆದ್, ಕೋಳಿ ಸುಕ್ಕ ಬಳಸುತ್ತಿದ್ದರು. ನೋಂಬು ತಿಂಗಳಲ್ಲಿ ತ್ಯಾಙÉಡೆ ಕಞÂ್ಞ, ಸೋಜಿ, ಚೊರೆಡೆ ಮನ್ನಿ, ಮೆತ್ತಡೆ ಮನ್ನಿ, ಕಡ್ಲೆ ಮನ್ನಿ ಇತ್ಯಾದಿ ಆಹಾರಗಳನ್ನು ಮಾಡುವರು. ಅದಲ್ಲದೆ ಕಾಫಿ, ಚಹಾ ಜತೆಗೆ ಸೀರ್‌ಕುರ್ಮ, ಪಯರೆ ತನ್ನಿಯನ್ನು ಕುಡಿಯುವುದು ಸಾಮಾನ್ಯವಾಗಿತ್ತು.
ಎಳೆಯ ಮಕ್ಕಳು ತೀರಿದಾಗ ಅವರ ಸವಿನೆನಪಿಗಾಗಿ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನೆರೆಯ ಎಲ್ಲಾ ಮಕ್ಕಳಿಗೆ ಹಾಲಿಗೆ ಬಾಳೆ ಹಣ್ಣನ್ನು ಬೆರೆಸಿ ಕೊಡುವ ಪದ್ಧತಿಯು ಕೆಲವು ಗ್ರಾಮಾಂತರ ಪ್ರದೇಶಗಳ ಬ್ಯಾರಿಗಳಲ್ಲಿ ಬಳಕೆಯಲ್ಲಿತ್ತು. ಇದಕ್ಕೆ `ಪಾಲುಂ ಬಾಲೆ’ ಎನ್ನುವರು. ಇದರ ಮುಖ್ಯ ಉದ್ದೇಶ ತೀರಿಹೋದ ಮಕ್ಕಳನ್ನು ಜ್ಞಾಪಕಕ್ಕೆ ತರುವುದು ಮತ್ತು ಅವರ ಮಗ್ಭಿರತ್‌ಗಾಗಿ ಪ್ರಾರ್ಥನೆ ಸಲ್ಲಿಸುವುದಾಗಿದೆ.
- ಆಭರಣ : ಬ್ಯಾರಿ ಸ್ತಿçÃಯರು ಮೈ ತುಂಬಾ `ಆಭರಣ’ ತೊಡಲು ಉತ್ಸುಕರಾಗಿದ್ದರು. ಈ ಸ್ತಿçÃಯರು ತೊಡುವ ಆಭರಣವು ಇತರ ಜನಾಂಗೀಯರಿಗಿAತ ತೀರಾ ಭಿನ್ನವಾಗಿದೆ. ಮದುವೆ ಮುಂಜಿ, ಹಬ್ಬ ಮತ್ತಿತರ ಸಮಾರಂಭಗಳಿಗೆ ಹೋಗುವಾಗ ಮೈ ತುಂಬಾ ಆಭರಣ ಧರಿಸುವುದು ಕಂಡು ಬರುತ್ತದೆ. ಆರಂಭದಲ್ಲಿ ಬೆಳ್ಳಿಯ ಆಭರಣ ಧರಿಸುತ್ತಿದ್ದರೆ, ಬಳಿಕ ಚಿನ್ನದ ಆಭರಣ ಧರಿಸುತ್ತಿದ್ದರು.
ಕಿವಿಯ ಆಭರಣವಾಗಿ ಅಲಿಖಾತು, ಞÁರಾಸೆ, ಲೋಲಾಕ್, ಬೆಂಡೆ ಲೋಲಾಕ್, ಕೊಪ್ಪು, ಸರಪೊಲಿ, ಬಾಲ್ಕಿ, ಜೋಲಾರ್, ಅರೋಲಿ, ಸರಪೊಲಿ, ಕರಾಂಪು, ಬಾಲ್ಸರ, ಕೊಪ್ಪು ಬಾಲ್ಸರ, ಚರ್ಮನೆ ಅಲಿಕಾತ್, ಇಲ್ಲಿ ಅಲಿಕಾತ್, ಚಾವಡ, ಕುಡ್ಕ, ಟಿಕ್ಕಿ, ಕಾಯಿಲ, ಮಿನ್ನಿ ಕಾಯಿಲ, ಕೊಂಬನ್ನಾ಼ಙ, ಪರಪಲೆ, ಒಲಿ, ಓಲೆ, ವಾಲೆ ಧರಿಸುತ್ತಾರೆ. ಪ್ರಾಯಕ್ಕೆ ಬಂದ ಹೆಣ್ಮಕ್ಕಳ ಬಲ ಕಿವಿಗೆ ೫ ಮತ್ತು ಎಡಕಿವಿಗೆ ೬ ಅಲಿಖಾತು ಹಾಕುತ್ತಾರೆ. ಅಂದರೆ ಇಸ್ಲಾಮ್‌ನ ಕರ್ಮಶಾಸ್ತçದ ೫ ಮತ್ತು ೬ರ ಅನುಪಾತದಲ್ಲಿ ಇದನ್ನು ಧರಿಸಲಾಗುತ್ತದೆ.
ಕಾಲಿನ (ಬೆಳ್ಳಿಯ) ಆಭರಣವಾಗಿ ಕಾಲ್ ಕುಣಿಪು, ಕಾಲ್ ಕಡಗ, ಪಾಡಗ, ಕಾಲ್ ಪಾಡಗ, ಕಾಲ್ ಸರಪಲಿ, ಕಾಲ್ ಚೈನ್, ಕಾಲ್ ಬಲೆ ಧರಿಸುತ್ತಾರೆ.
ಚಿನ್ನದ ಸೊಂಟ ಪಟ್ಟಿಯಾಗಿ ಅರ್ಜ್ಞಾನ, ನೂಲು, ಅರ್ಜ್ಞಾನ ನೂಲು, ಬೆಲ್ಲಿ ಅಜ್ಞಾÁðನ, ಮಿನ್ನಿ ಅಜ್ಞಾõÁðನ, ಕೋಕೆ ಅಜ್ಞಾÁðನ, ನಡುರೆ ನೂಲು (ಪಟ್ಟಿ), ಅರೆಪಟ್ಟಿ, ಕಡ್ಕ ಧರಿಸುತ್ತಾರೆ.
ಕುತ್ತಿಗೆಯ ಆಭರಣವಾಗಿ ಒತ್ತೆರ್ಕು, ಅಂಜಿರ್ಕು, ಉರ್ಕು ಪರ್ತಲ್, ಉರುಕು ಮಾಲೆ, ಬೆಲಿಯೆ ಮಾಲೆ, ಅವ್ಲು ಮಾಲೆ, ಮಿನ್ನಿ ಮಾಲೆ, ಮೂನುರ್ಕು ಮಾಲೆ, ಚಟ್ಟೆ ಉರುಕು ಮಾಲೆ, ಅರೆತಾಲಿ, ಪದಕ, ಕೊಂಗಟ್ಟೆ, ಪೂಮಾಲೆ, ತಾರಿಮಾಲೆ, ನೆಕ್ಲೆಸ್ ಮಾಲೆ, ಮಲ್ಲಿಗೆ ಮಾಲೆ, ಪಂದಲ್ ಮಾಲೆ, ಕುಮಾರಿ ಸರ, ತಾವರೆ, ತಾವರೆ ಜಾಲರಿ, ಎವರೆಸ್ಟ್ ಜಾಲರಿ, ನೆತ್ತಿಕುರಿ, ಮಾಟಿ, ರಟ್ಟೆರೆ ಪಟ್ಟೆ, ಕೊಪ್ಪು, ತಾಳಿ, ಚಪ್ಪು, ಗೆಜೆತಿಕ್ ಮಾಲೆ, ಬಂದಿ ಮಾಲೆ, ಮಿಸ್ರಿಮಾಲೆ, ನಾಲ್ ಚುತ್ತು ಮಾಲೆ, ಕರ್ತೆ ಮನಿ ಮಾಲೆ, ಬಾಲೀಕ್, ಪದಕಲ, ಚಾನೊಲ್ಡೆ ಮಾಲೆ, ನೆಞÂ್ಞಮಾಲೆ, ಪತ್ತೊಲು ಮಾಲೆ, ಚಾನೊಲು ಉರ್ಕು, ಬಂದಿ, ಪಡಕರೆ, ಸರ, ಕರಿಮನಿ, ಚೆತ್ತ್ಚಾಲಿ, ಚೆತ್ತಂ, ಮೂನಟ್ಟಿ ಧರಿಸುತ್ತಾರೆ.
ಕೈಯ ಆಭರಣವಾಗಿ ಮುರುಗಿ, ಕೆಟ್ಟ್ಬಲೆ, ಎದರ‍್ರೆ ಬಲೆ, ಚುರುಗಿ, ಕೈ ಕಡಗ, ಕೈಕಲ, ಕಂಕಣ, ಅಸಕಡಗ, ಕಾಮೂಸ್ ಕಡಗ, ಸೊರಿಗೆ ಬಲೆ, ಅಲ್ಸಂದೆ ಬಲೆ, ದಂಕಣ, ಚೂಡಗ, ಪಾಮ್‌ಬಲೆ, ಬರಿಮಲೆ, ಪಿರಿಬಲೆ, ಎಲೆಬಲೆ, ಕೈಸೆಟ್, ಕೊತ್ತುಬಲೆ, ತಂಡೆಬಲೆ, ಚಪ್ಪಲೆ, ರಟ್ಟೆ ಬಲೆ, ಕೊಂಬನ್ನಙ ಹಾಗು ಕೈ ಬೆರಳಿನ ಆಭರಣವಾಗಿ ಸೆಟ್ಟ್ ಮೋದರ, ಪಾವಲಿ ಮೋದರ ಧರಿಸುತ್ತಾರೆ.
ತಲೆಯ ಆಭರಣವಾಗಿ ತಲೆ ಸಿಂಗಾರ, ಚೌರಿ, ನೇರ ನಿಲಾವು, ತಿರುಪುರೆ ಪೂ, ಮುಡಿಪಲೆ, ಮಲ್ಲಿಗೆ ಪೂ, ಜಾಡೆಪಲ್ಲೆ, ಜಾಡೆಸೆಲ್ಲೆ, ರಾಕುಟ್ಟಿ, ರಕಾತಿ, ಕೇದಗೆ, ಕುಟ್ಟ ಕೇದಗೆ ಬುಗಡಿ ಧರಿಸುತ್ತಾರೆ.
ಆದರೆ ಸಾಂಪ್ರದಾಯಿಕ ಆಭರಣಗಳು ಕಣ್ಮರೆಯಾಗುತ್ತಿದ್ದು, ಅವುಗಳ ಸ್ಥಾನವನ್ನು ನೆಕ್ಲೆಸ್, ಟಿಕ್ಕಿ, ಬಾಲ್ಸರ ಇತ್ಯಾದಿ ಆಕ್ರಮಿಸಿದೆ. ಅದಕ್ಕೆ ಇಂಗ್ಲಿಷ್‌ನಲ್ಲೇ ಹೆಸರಿಸುವ ಪರಿಪಾಠ ಬೆಳೆಯುತ್ತಿದೆ. ಅವುಗಳ ಮಧ್ಯೆ ಚಿನ್ನಾಭರಣವನ್ನು ಪೇರಿಸಿಡುತ್ತಿದ್ದ ಪೆಟ್ಟಿಗಳು ಕೂಡ ಇಲ್ಲವಾಗಿದೆ. ಆದರೂ ಹಳೆಯ ಆಭರಣಗಳ ಆಕರ್ಷಣೆಯಿಂದ ಬ್ಯಾರಿ ಸ್ತಿçÃಯರು ಪೂರ್ಣ ಮುಕ್ತರಾಗಿಲ್ಲ.
ಬದಲಾಗುತ್ತಿದೆ, ಬ್ಯಾರಿ ಜಗತ್ತು!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರೀಕೃತಗೊAಡಿರುವ ಪ್ರಸ್ತುತ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗೂ ವ್ಯಾಪಿಸಿರುವ ಬ್ಯಾರಿ ಜನಾಂಗ ಇಂದು ಜಾಗತೀಕರಣದ ಭರಾಟೆಗೆ ಸಿಲುಕುತ್ತಿದೆ. ಅರ್ಥಾತ್ ಬ್ಯಾರಿ ಜಗತ್ತು ಬದಲಾಗುತ್ತಿದೆ. ನಿನ್ನೆ ಮೊನ್ನೆ… ಬಣ್ಣ ಬಣ್ಣದ ಮುಂಡುಟ್ಟು, ಅದರ ಮೇಲೊಂದು ಮಾಸಿದ ಬಿಳಿ ಬಟ್ಟೆ ಧರಿಸಿ ಎಲ್ಲೆಂದರಲ್ಲಿ ಬೀಡಿಯ ದಮ್ಮು ಎಳೆಯುತ್ತಾ ಕೈಯಲ್ಲೋ, ಬಟ್ಟೆಯ ಕಾಲರಿಗೋ `ತೂವಾಲ್’ ಎಂಬ ಕೈ ವಸ್ತç ಸಿಕ್ಕಿಸಿಕೊಂಡು ನಡೆಯುತ್ತಿದ್ದ ಮುಗ್ಧ ಬ್ಯಾರಿಗಳ ಮಕ್ಕಳು ಇಂದು ಶಿಕ್ಷಣದ ಮಜಲು ಹತ್ತಿ ಬದಲಾಗುತ್ತಿರುವ ಜಗತ್ತಿಗೆ ಒಗ್ಗಿ ಕೊಳ್ಳುತ್ತಿದ್ದಾರೆ. ಆದರೆ ಬ್ಯಾರಿ ಜನಾಂಗದ ಹಿರಿಯ ತಲೆಗಳು ಈಗಲೂ ಹಲಸಿನ ತುಂಡುಗಳನ್ನೋ ಅಥವಾ ಬುಟ್ಟಿಯಲ್ಲಿ ಮೂಸಂಬಿ, ಕಿತ್ತಳೆ, ಮೀನು ಮಾರಿ ಬದುಕಿನಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ. ಜತೆಗೆ ಜಾಗತೀಕರಣದ ಭರಾಟೆಯನ್ನು ಎದುರಿಸಲಾಗದೆ ಸದ್ದಿಲ್ಲದೆ ಸೋಲುತ್ತಿದ್ದಾರೆ. ಅಂದರೆ ಬದುಕಿನ ಅವಿಭಾಜ್ಯ ಅಂಗ ಎಂಬAತಿದ್ದ ತಾವು ಹಿಂದೆ ಬಳಸುತ್ತಿದ್ದ ಅಡುಗೆ ಪರಿಕರ, ಆಭರಣ, ಉಡುಪುಗಳು ಕಣ್ಮರೆಯಾಗುತ್ತಿದ್ದುದನ್ನು ಕಂಡು ಕಾಣದಂತೆ ಸುಮ್ಮನಿದ್ದಾರೆ ಅಥವಾ ಅವುಗಳನ್ನು ಉಳಿಸಲಾಗದೆ ಕೊರಗುತ್ತಿದ್ದಾರೆ.
ಹಿಂದೆ ಬ್ಯಾರಿ ಹಿರಿಯರು ಯಾವ ಕೆಲಸ/ವ್ಯಾಪಾರ ಮಾಡುತ್ತಿದ್ದರೋ ಮಕ್ಕಳು ಕೂಡ ಅದನ್ನೇ ಮುಂದುವರಿಸುತ್ತಿದ್ದರು. ಮುಂಜಾನೆ ಎದ್ದು ಮಂಗಳೂರಿನ ಮೀನಿನ ದಕ್ಕೆಗೋ, ಸೆಂಟ್ರಲ್ ಮಾರ್ಕೆಟ್‌ಗೋ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು. ಅದಕ್ಕಾಗಿ ಕೆಲವರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದೂ ಇದೆ. ಆದರೆ, ಇಂದು ಕಾಲ ಬದಲಾಗಿದೆ. ಬ್ಯಾರಿ ಗಂಡ್ಮಕ್ಕಳು ಮಾತ್ರವಲ್ಲ ಹೆಣ್ಮಕ್ಕಳು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ.
ಇವೆಲ್ಲದರ ಮಧ್ಯೆ ಬ್ಯಾರಿ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮತ್ತು ಸಾಹಿತ್ಯವನ್ನು ಸೃಷ್ಟಿಸುವ ಪ್ರಯತ್ನ ಒಂದೆಡೆ ಸಾಗಿದ್ದರೆ, ಇನ್ನೊಂದೆಡೆ ಜಾಗತೀಕರಣ ಅವೆಲ್ಲವನ್ನೂ ಸದ್ದಿಲ್ಲದೆ ಕೊಲ್ಲುತ್ತಿದೆ. ಹಾಗಾಗಿ ಇಂದು ಬ್ಯಾರಿಗಳ ಆಭರಣ, ಅಡುಗೆ ಮನೆಯ ಪರಿಕರಗಳು, ಉಡುಪುಗಳು ಎಲ್ಲವೂ ಕಾಲನ ಹೊಡೆತಕ್ಕೆ ಸಿಲುಕುತ್ತಿವೆ. ಹಳೆಯ ಆಭರಣಗಳು ಇಂದು ಮಾಯವಾಗುತ್ತಿದೆ. ಅವುಗಳ ಬದಲು ಹೊಸ ವಿನ್ಯಾಸದ ಆಭರಣಗಳು ಬರುತ್ತಿವೆ. ಅದಕ್ಕೆ ಇಂಗ್ಲಿಷ್‌ನಲ್ಲೇ ಹೆಸರಿಸುವ ಪರಿಪಾಠ ಬೆಳೆಯುತ್ತಿದೆ. ಅವುಗಳ ಮಧ್ಯೆ ಚಿನ್ನಾಭರಣವನ್ನು ಪೇರಿಸಿಡುತ್ತಿದ್ದ `ಪೆಟ್ಟಿ’ (ಪೆಟ್ಟಿಗೆ)ಗಳು ಕೂಡ ಇಲ್ಲವಾಗಿದೆ.
ಹಿಂದೆ ಮದುವೆಗೆ ಮುಂಚೆ ಮಾತನಾಡುವುದು ಬಿಡಿ, ಗಂಡು-ಹೆಣ್ಣು ನೋಡುವುದು ನಿಷಿದ್ಧವಾಗಿತ್ತು. ಈಗ ಪರಸ್ಪರ ನೋಡುತ್ತಾರೆ. ಮಾತನಾಡುತ್ತಾರೆ. ಮದುವೆಯಾಗುವವರೆಗೂ ಹರಟೆ ಹೊಡೆಯಲು ಮೊಬೈಲ್ ಗಿಫ್ಟ್ ನೀಡುತ್ತಾರೆ. ಹಿಂದೆ ಎಲ್ಲರೂ ಜತೆಯಾಗಿ ಊಟ ಮಾಡುತ್ತಿದ್ದರೆ, ಈಗ ಎಲ್ಲೆಡೆ ಬಫೆ ಸಿಸ್ಟಂ ಬಂದಿದೆ. ಮದುವೆಯ ಸಾಂಪ್ರದಾಯಿಕ ಉಡುಗೆ ಮಾಯವಾಗಿ ಬಾಡಿಗೆಗಾದರೂ ಸರಿ, ಸೂಟ್‌ಕೋಟ್ ಧರಿಸುವುದು ಕಂಡು ಬರುತ್ತದೆ.
ಹಿಂದೆ ಅಡುಗೆ ಮನೆಯಲ್ಲಿ ಮಣ್ಣಿನಿಂದ ತಯಾರಿಸಿದ ಮಡಕೆಗಳು, ಮರದಿಂದ ತಯಾರಿಸಿದ ಸೌಟು ಮತ್ತಿತರ ಪರಿಕರಗಳು ಯಥೇಚ್ಛವಾಗಿ ಕಾಣುತ್ತಿದ್ದವು. ೨೦-೩೦ ವರ್ಷದ ಹಿಂದೆ ಅವೆಲ್ಲವನ್ನೂ ಅಲ್ಯುಮಿನಿಯಂನಿAದ ತಯಾರಿಸಿದ ಪಾತ್ರೆ ಪಗಡೆಗಳು ಆಕ್ರಮಿಸಿಕೊಂಡಿತ್ತು. ಆದರೆ ಇದೀಗ ಮಣ್ಣಿನ ಮತ್ತು ಅಲ್ಯುಮಿನಿಯಂ ಪಾತ್ರೆಗಳು ಕೂಡ ವಿರಳ. ಆ ಸ್ಥಾನದಲ್ಲಿ ಸ್ಟೀಲ್ ಮತ್ತು ನಾನ್‌ಸ್ಟಿಕ್ ಪಾತ್ರೆಗಳನ್ನು ಕಾಣಬಹುದು. ಒಂದೊAದು ಪಾತ್ರೆಗಳಿಗೆ ಅದರz್ದÉÃ ಆದ ಮಹತ್ವವಿತ್ತು. ಆದರೆ, ಇಂದು ಅದೆಲ್ಲ ತನ್ನ ಮಹತ್ವ ಕಳಕೊಂಡಿದೆ.
ಮರತ್ತೆ ಕಯಿಲ್, ಕುಡುಪು, ದಾಂಕನೆ, ರ‍್ಲಿ/ಉರುಲಿ, ಸಾನ್, ಪಿಂಞನ, ಪಿಂಞAತೆ ಕಯಿಲ್, ಬಟೆಂಙÂ, ಅಡ್ಸೊಲಿ, ಬಾಡೆ, ಸುಕ್ರಿಂಙÂ, ಕಲ, ಕಡಾಯ, ಚೂರಿ (ಮಣ್ಣ್ರೆ ಕಲ), ಕೊಂಡೆ, ಪತ್ತ್ರೆ ಮನೆ, ಇರ್ಮಂಡೆ ಮನೆ, ಸೇಮೆರೆ ಮನೆ, ಚರೆಮನೆ, ತೊಂದರೆ ಕಲ, ಬನಲೆ, ಗುಲಿಯಪ್ಪತ್ತೆ ಯಡ, ತಗರಿ, ಕಾವಲಿ, ಚಟ್‌ಙ, ಬಿಸೆಲಿ, ತಪಲೆ, ತುಪ್ಪುಡೆಯಡ, ಉಪ್ಪುರೆ ಬರನಿ, ನೆಯಿ ಪಿನ್ನೆ ಪಾಲ್ ಬೀತ್‌ರೆ ಕುತ್ತಿ, ಅರ್ಕಚ್ಚಿ ಯಡ, ಮೋರು ತೊಲಿಕ್‌ರೆದ್, ಬೆತ್ತಲೆ ಕುತ್ತುರೆದ್, ಪೊಡಿ ಕರೆಂಡೆ… ಇತ್ಯಾದಿ ಮಾಯವಾಗುತ್ತಿದೆ.
ಬ್ಯಾರಿಗಳು ಧರಿಸುತ್ತಿದ್ದ ಉಡುಪುಗಳು ಕೂಡ ಕಾಲಕ್ಕೆ ತಕ್ಕಂತೆ ಮಾರ್ಪಟ್ಟಿವೆ. ಹಿಂದೆ ಬಿಳಿ ಅಥವಾ ಬಣ್ಣ ಬಣ್ಣದ ಮುಂಡು ಮತ್ತು ಅಂಗಿ ಪುರುಷರ, ಲಂಗ ರವಕೆ ಬಾಲಕಿಯರ, ಸೀರೆ, ಕುಪ್ಪಾಯ ಹೆಂಗಸರ ಉಡುಪಾಗಿತ್ತು. ಇಂದು ಆ ಸ್ಥಾನದಲ್ಲಿ ಪ್ಯಾಂಟ್, ಶರ್ಟ್, ಚೂಡಿದಾರ, ಮಿಡಿ, ನೈಟಿ ಇತ್ಯಾದಿಯನ್ನು ಕಾಣಬಹುದು.
ಕತ್ತಿನ ಹಿಂಬದಿಯ ಬೆವರು ಅಂಗಿಯ ಕಾಲರ್‌ಗೆ ಅಂಟದAತೆ ಬ್ಯಾರಿ ಹಿರಿಯರು ಹಿಂದೆ ತೂವಾಲ್ ಎಂಬ ಕೈ ವಸ್ತçವನ್ನು ಬಳಸುತ್ತಿದ್ದರು. ಆದರೆ ಇಂದು ಅದು ಕತ್ತಿನ ಹಿಂಬದಿ ಕಾಣುವುದಿಲ್ಲ. ಮಹಿಳೆಯರು ಯಲ್ಸರ ಎಂಬ ತಲೆವಸ್ತç ಕಟ್ಟುತ್ತಿದ್ದರು. ಇಂದು ಅದು ಕೂಡ ಇಲ್ಲ. ಕುಪ್ಪಾಯ ಎಂಬ ಕುಪ್ಪಸವಂತೂ ಕಾಣಲು ಅಪರೂಪವಾಗಿದೆ. ಬ್ಯಾರಿ ಯುವಕರು ಪ್ಯಾಂಟ್, ಶರ್ಟ್ ಜತೆಗೆ ಟೀ ಶರ್ಟ್, ಜುಬ್ಬಾ, ಪೈರಾಣಿ ಇತ್ಯಾದಿಯತ್ತ ಆಕರ್ಷಿತರಾಗುತ್ತಿದ್ದಾರೆ.
ಮನೆ ಮತ್ತಿತರ ಕಡೆ ಬ್ಯಾರಿಗಳು ಹಿಂದೆ ಬಳಸುತ್ತಿದ್ದ ವಸ್ತುಗಳು ಕೂಡ ಇಂದು ಕಣ್ಮರೆಯಾಗುತ್ತಿದೆ. ಅದರಲ್ಲಿ ಲ್ಯಾಂಪು, ಲಾmನ್, ಕೋಂಚಿ, ಕಲಸೆ/ಗಲಸೆ, ಕಲಸೆರೆ ಕೋಲು, ಸಸ್ತ್, ಜಬನ್, ಮರತ್ತೆ ಕುರ್ಸು, ಕಲಂಬಿ/ಕಲೆAಬಿ, ಉಂಜಾಲ್, ಮೆದ್ಕಡಿ, ಕನ್ನಾಟಿ, ವಾಚಿ, ಪೂದಾನಿ, ಪನ್ನೀರ್ ಬೀತ್‌ರೆದ್, ತನ್ನಿ ಏತ್‌ರೆ ಮರಯಿ, ಮಯಿರೆ ಕರಂಡೆ, ನರ‍್ರೆ ಕರಂಡೆ, ಉರಿ, ಊದುಬತ್ತಿ ಕುತ್ತಿ ಬೆಯಿಕ್‌ರೆದ್,ಮರತ್ತೆ ಪೆಟ್ಟಿ, ತಾಕೊಲ್ಲೆಜೊಂಕೆ, ಬಿರೋಲಿ, ಕುರುವೆ, ಮಣೆ, ಮರತ್ತ್ರೆ ಗಡಿಯಾಲ್, ತೋಲ್ಲೆ ಬೆಲ್ಟ್ ಇದೆಲ್ಲವನ್ನೂ ಇಂದು ಬ್ಯಾರಿಗಳು ಬಳಸುವುದನ್ನು ಕಡಿಮೆ ಮಾಡಿದ್ದಾರೆ.
ಒಟ್ಟಿನಲ್ಲಿ ಬ್ಯಾರಿ ಜಗತ್ತು ಬದಲಾಗುತ್ತಿದೆ. ಸಣ್ಣಪುಟ್ಟ ಕೆಲಸಕ್ಕಾಗಿ ಗಲ್ಫ್ ರಾಷ್ಟçದತ್ತ ಮುಖ ಹಾಕುತ್ತಿದ್ದ ಬ್ಯಾರಿ ಯುವಕರು ಇಂದು ತಾಂತ್ರಿಕ ಶಿಕ್ಷಣ ಪಡೆದು ಜಗತ್ತಿನ ನಾನಾ ಮೂಲೆಗಳಲ್ಲಿ ನೆಲೆಯೂರುತ್ತಿದ್ದಾರೆ.