ಬ್ಯಾರಿ ಸಾಹಿತ್ಯದ ಇತಿಹಾಸ

ಬಿ.ಎ. ಮುಹಮ್ಮದ್ ಅಲಿ

ಬ್ಯಾರಿ ಸಾಹಿತ್ಯಕ್ಕೆ ಸುಮಾರು ೧೪೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದರೂ ಮುದ್ರಣ ಸಾಹಿತ್ಯ ಬೆಳಕಿಗೆ ಬಂದದ್ದು ೧೯೯೭ರಲ್ಲಿ. ಅದುವರೆಗಿನ ಬ್ಯಾರಿ ಸಾಹಿತ್ಯವು ಮೌಖಿಕ ವಾಗಿದ್ದು, ಅದರ ಸಂಗ್ರಹ ಕಾರ್ಯಗಳು ನಡೆದಿರಲಿಲ್ಲ. ಮಾತೃಭಾಷೆ ಬ್ಯಾರಿಯಾಗಿದ್ದರೂ ಬ್ಯಾರಿಗಳಲ್ಲಿದ್ದ ಶಿಕ್ಷಣದ ಕೊರತೆ, ಬ್ಯಾರಿ ಭಾಷೆಗೆ ಲಿಪಿ ಇಲ್ಲದಿರುವುದು ಇದಕ್ಕೆ ಒಂದು ಕಾರಣವಾದರೆ, ಬ್ಯಾರಿಗಳು ಶಾಲೆಯಲ್ಲಿ ಕನ್ನಡ ಕಲಿತು-ಕನ್ನಡದಲ್ಲೇ ಬರೆಯುವುದು, ಓದುವುದು ಮಾತ್ರವಲ್ಲ, ತಮ್ಮ ಎಲ್ಲಾ ವ್ಯವಹಾರಗಳಿಗೂ ಕನ್ನಡವನ್ನೇ ಮಾತೃಭಾಷೆಯಂತೆ ಬಳಸಿಕೊಂಡರು. ಇಲ್ಲಿ ಅವರಿಗೆ ಮಾತೃಭಾಷೆಯಲ್ಲಿ ಬರೆಯಬೇಕೆಂಬ ಒಂದು ಅಗತ್ಯವೂ ಕಾಣಲಿಲ್ಲ. ಬ್ಯಾರಿ ಬದುಕು, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕೇಂದ್ರದ ವ್ಯವಹಾರಗಳು ಮುಂತಾದ ಎಲ್ಲವನ್ನೂ ಅವರು ಕನ್ನಡದಲ್ಲೇ ದಾಖಲಿಸಿದರು. ಬ್ಯಾರಿ ಮಾತೃಭಾಷೆಯವ ರಾದ ಖ್ಯಾತ ಲೇಖಕರಾದ ಬೊಳುವಾರು ಮುಹಮ್ಮದ್ ಕುಂಞÂ, ಫಕೀರ್ ಮುಹಮ್ಮದ್ ಕಟ್ಪಾಡಿ, ಬಿ.ಎಂ ಇದಿನಬ್ಬ, ಅಬೂರೈಹಾನ ಅಹ್ಮದ್ ನೂರಿ, ಇಬ್ರಾಹೀಂ ಸಈದ್, ಪಿ. ನೂರು ಮುಹಮ್ಮದ್ ಉಪ್ಪಿನಂಗಡಿ, ಬಿ.ಎಂ. ಹನೀಫ್, ಬಿ.ಎಂ. ಬಶೀರ್, ಮುಹಮ್ಮದ್ ಕುಳಾಯಿ ಮುಂತಾದವರೆಲ್ಲ ತಮ್ಮ ಕಥೆ, ಕಾದಂಬರಿ, ಬರಹಗಳಲ್ಲಿ ಬ್ಯಾರಿ ಪಾತ್ರಗಳನ್ನು, ಸಂಸ್ಕೃತಿಯನ್ನು, ಬದುಕನ್ನು ಚಿತ್ರಿಸಿದರಾದರೂ ಬರವಣಿಗೆಗೆ ಬ್ಯಾರಿ ಭಾಷೆಯನ್ನು ಬಳಸಿಕೊಳ್ಳಲಿಲ್ಲ. ಆದರೂ ಇವರ ಬರಹಗಳು ಜಗತ್ತಿಗೆ ಬ್ಯಾರಿ ಸಮುದಾಯವನ್ನು ಪರಿಚಯಿಸುವಲ್ಲಿ ಯಶಸ್ವಿಯಾದುವು. ಡಾ. ವಹಾಬ್ ದೊಡ್ಡಮನೆ, ಡಾ. ಸುಶೀಲಾ ಪಿ. ಉಪಾಧ್ಯಾಯ ಮತ್ತು ಪ್ರೊ. ಇಚ್ಚಂಗೋಡುರAತಹ ಸಂಶೋಧಕರು ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮುದಾಯದ ಬಗ್ಗೆ ಸಂಶೋಧನಾ ಕೃತಿಗಳನ್ನು ರಚಿಸಿದರಾದರೂ ಅವೂ ಕನ್ನಡದಲ್ಲೇ ಇತ್ತು. ಇವರೆಲ್ಲರ ಪ್ರಯತ್ನದಿಂದಾಗಿ ಬ್ಯಾರಿ ಭಾಷೆ ಯಲ್ಲೂ ಶ್ರೀಮಂತವಾದ ಜಾನಪದ ಹಾಡುಗಳು, ಕಥೆಗಳು, ಒಗಟುಗಳು, ನುಡಿಮುತ್ತು ಗಳು, ಗಾದೆಗಳು, ಮೊÊಲಾಂಜಿ, ದಪ್ಪು, ಒಪ್ಪನೆ ಹಾಡುಗಳು, ಚೀನಿಕೋಲು, ಕೋಲ್ಕಲಿ ಯಂತಹ ಮೌಖಿಕ ಹಾಡುಗಳಿದ್ದವು ಎಂಬುದು ಬೆಳಕಿಗೆ ಬಂತು. ಮತ್ತು ಅದನ್ನು ದಾಖಲಿಸುವ ಪ್ರಯತ್ನಗಳೂ ನಡೆಯತೊಡಗಿದವು. ವಿವಿಧ ಸಂದರ್ಭಗಳಲ್ಲಿ ಅಂದು ಹಾಡುತ್ತಿದ್ದ ಹಲವು ಮೌಖಿಕ ಜಾನಪದ ಸಾಹಿತ್ಯದ ಎಸಳುಗಳು ಈ ರೀತಿ ಇವೆ:

ಮದುವೆ ಸಂದರ್ಭದ ಹಾಡು

ಅಚ್ಚಬಾಕರೊ ಮೋಲೊ ಮೋಲುಗು ನಾಲೆ ಜಾವುಗು ಮಂಙÂಲ

ಎಲ್ಲಾರ್ಗುA ತಾಲ ಮೇಲ, ಅಚ್ಚಬಾಕೊಗು ಮೇಲ ಕೀಲ್

ಎಲ್ಲಾರ್ಗುಂ ಅವುಲು ಬಾಲೆ, ಅಚ್ಚಬಾಕೊಗು ಪೊದೊರಿ ಬಾಲೆ

ಎಲ್ಲಾರ್ಗುಂ ಕೋಲಿ ಕಾಚದ್ ಅಚ್ಚಬಾಕೊಗು ಪೂಜೆ ಕಾಚದೆ

ಜೋಗುಳ ಹಾಡು

ಆನೆ ಆನೆ ಕುಂಞÁನೆ

ಆನೆ ಕೆಟ್ಟೊಗು ಬಲ್ಲಿಲ್ಲೆ

ನಂಡೊ ಮೋಂಡೊ ಬಾಯಿಲ್ ಪಲ್ಲಿಲ್ಲೆ.

ಮುಟ್ಟತ್ತಾನೆ, ಮರ್ಲಾನೆ

ಜೋಗಿ ಅರಸರೆ ಪೆನ್ನಾನೆ

ಆನೆಂ ಕುದುರೆಂ ಬಾಲ್ಲಾಲ್‌ಗ್

ಮಂಗಯಿ ಸರಪೂಲಿ ನಂಡೊ ಮೋನುಗು

ಪೆರ್ನಾಲ್‌ಗ್ ನೀನ್ ಒರ್ಕ ಬರ್ನುವುಲ

ನೀನಿಟ್ಟೆ ಕುಪಯ ಮಾತಿಟ್ಟ್, ನಕ್ಕೊರ್ಕ ತರ್ನುವುಲ

ನಂಡೊ ಮೋಲು ಬಾಲುಂಬೊ ಆರ್ಗೆಲ್ಲ ಕೊಂಡಾಟ್

ಅಬ್ಬೊಗುA ಕೊಂಡಾಟ, ಉಮ್ಮೊಗುಂ ಕೊಂಡಾಟ

ನAಡೊ ಮೋಲು ಬಾಲುಂಬೊ, ಎಂದೆಲ್ಲ ಬೇನುವುಲಾ

ಮಾಂಙೆರೊ ಮರಕೊತ್ತಿಟ್ಟ್, ಉಂಜಾಲಿಡೊನುವುಲ

ಚೆಕ್ಕೆರೊ ಮರ ಕೊತ್ತಿಟ್ಟ್, ಕಟಿಲಿಡೊನುವುಲಾ….

ಅಜ್ಜಿ ಹಾಡುಗಳು

ಬೆಲಮಾ ಬೆಲಮಾ…. ನಙಲೊ ಬೆಲಮ

ವರಕ್ ಬರೋಲೊ ಮಸಲೆ ಚೆಲ್ಡೊ ಪಾವತ್ತೊ ಬೆಲಮ

ನಙಲೆಲ್ಲಾರೊಂ ಪಿರ್ಸತ್ತೊ ನಲ್ಲೊ ಬೆಲಮ

ಪಲ್ಲಿಲ್ಲಾತೊ ಚಿರಿಕ್‌ರೊ ಚಂದತ್ತೊ ಬೆಲಮ

ತಮಾಷೆಯ ಉಪಚಾರದ ಹಾಡುಗಳು

ಬೆಚ್ಚ ತನ್ನಿ ಕುಲ್ಕೆಲುಂಡು

ಚಪ್ಪೆ ತನ್ನಿ ಕೆನ್ತ್ಲುಂಡು

ಕುಲಿಮೋನೆ…ಕುಲಿಮೋನೆ…

ಅಪ್ಪ ಚುಡು ಚುಡು ಪಾತುಮಾ

ಇಪ್ಪ ಬರು ಬರು ಮಾಪುಲೆ

ಬನ್ನ ಮಾಪುಲೆ ಮಾಂಞÂಪೋಯಿ

ಚುಟ್ಟೊ ಅಪ್ಪ ಕರಿಂಞÂ ಪೋಯಿ

ನಡನ್ ಬಂತ್ ಬಚ್ಚಿಡ್ ಚೆಂತ್

ತೆಲ್ಲ್ ಕೆಡನ್ ಒರಂಙ್ ಚೆಂತ್

ಅಪರ್ತೆ ಅವುತೆ ಬೆಂಚಿ ಕೊಡಂತ್

ನಙಲೊ ನಲ್ಲೊರು ಮಾಮಿ

ನಙಲೊ ಬಂಗಾರ್ ಮಾಮಿ

ಏ ಮೋಲೆ ಸಾರಮ್ಮ ಮಾಲಿಗೆ ಪತ್ತಂಡ

ಮಾಲಿಗೆ ಪತ್ತಿಯೆಂಗ್ ಕಲ್ಜಾರಿ ಬೂಲುವೇ

ಕಾಲ್ಜಾರಿ ಬೂನೆಂಗ್ ಬಿರ್‌ಂದಾರೆಲ್ಲ ಬರ್‌ವಾರ್

ಬಿರ್ಂದಾರೆಲ್ಲ ಬನ್ನೆಂಗ್ ಸರ್‌ಬತ್ತಾಕಿ ಕೊಡ್ಕೋನು

ಸರ್‌ಬತ್ತಾಕಿ ಕೊಡ್ತೆಂಗ್ ಪಂತಾರೆಲ್ಲ ಕಾಲ್ಯಾವು

ಮಕ್ಕಳ ಹಾಡುಗಳು

ಅರ್ಪೆಂ ತಿರ್ಪೆಂ ತೋರೆಗ್ ಮಂಙÂಲ

ಬಲಿಪA ಪಲ್ಲಿಲ್ ಬಾಂಗ್ ಕೊಡ್ಕುಂಬೊ

ಎAದುಪ್ಪು…ಮುರ್ಕಿಪ್ಪು

ಮುರ್ಕಿ ಚರ್ಕಿ ಎನ್ನೆ ಕುಡ್ಚಿ

ಕಾಲಾ ಕೈಯ ಒನ್ನಾ ಜಂಡಾ

ಕೊತ್ತಿ ಕೊತ್ತಿ ಮಡಕಟ್ಟೆ

ಚುಂಯ್ ಚುಂಯ್ ಚೆಕ್ಕೆಡಪ್ಪ

ಅಜ್ಜಿ ಚೆನ್ನೊ ಚೆಕ್ಕೆ ತರೊನುವುಲ…

ತಬಲಕ್ ತಿಂತ್, ತನ್ನಿ ಕುಡಿಚ್ಚಿ

ಅಲ್ಲಾ…ನಕ್ಕೊರು ನೋಂಬುತಾ

ಏ ಅಬ್ಬುಕಾಕ ನಿಙಲೊ ತೊಕ್ಕುಲೆಂದ್ರೊಮೆ?

ಅದ್ ಮಂಞಲಾಯಿಡಲ್ಲೆ?

ಅದ್ರೆ ತೊಟ್ಟು ನೋಕಾಮಾ?

ಅದ್‌ಕ್ ನೊಂಬಲಾವುಲ್ಲೆ?

ಅದ್‌ರೆ ಚಿಕ್ಕಿ ನೋಕಾಮಾ?

ಅದ್‌ಲ್ ಚೋರೆ ಬರುವಲ್ಲೆ…?

೧೯೫೦-೬೦ರ ದಶಕದಲ್ಲಿ ಮದುವೆ-ಮೊÊಲಾಂಜಿ ಸಮಾರಂಭಗಳಲ್ಲಿ ಹಾಡುತ್ತಿದ್ದ ಬ್ಯಾರಿ ಹಿರಿಯರಿದ್ದರು. ಅವರು ಧ್ವನಿಯಲ್ಲಿ ಶ್ರೀಮಂತರು, ಆರ್ಥಿಕವಾಗಿ ಶ್ರೀಮಂತರು, ಘನತೆಯಲ್ಲೂ ಶ್ರೀಮಂತರಾಗಿದ್ದರು. ಗುರುಪುರ ಶಾಲೆಯ ತಂಟೆ ಬಾವಾಕ ಸಹೋದರರು, ಅರ್ಕುಳ ಗ್ರಾಮದ ಫಕೀರ ಬ್ಯಾರಿ ಹಾಡುತ್ತಿದ್ದ ‘ಅರಸರ ತಿರಿಯುಂ ಸರದೋ ಮೈಸ್‌ರ’ ಎಂಬ ಟಿಪ್ಪುಸುಲ್ತಾನರ ಬಗೆಗಿನ ಹಾಡು ಅವರ ಧ್ವನಿಯಲ್ಲಿ ಇಂದೂ ಕೇಳಲು ಬಯಕೆಯಾಗುತ್ತಿದೆ ಎಂದು ನಮ್ಮಲ್ಲಿ ಹಿರಿಯರು ಈಗಲೂ ಹೇಳುವುದುಂಟು.

ಮಳೆಯಾಳಿ ಮಾಪಿಳ್ಳೆ ಹಾಡುಗಳ ಅಲೆಯಲ್ಲಿ ಕೊಚ್ಚಿಹೋಗಿದ್ದ ಬ್ಯಾರಿ ಜನಪದ ಹಾಡಿಗೆ ಹೊಸಜೀವ ತುಂಬಿದವರು ರಹೀಂ ಬಿ.ಸಿ.ರೋಡ್ (ಇನೋಳಿ), ಇಬ್ರಾಹೀಂ ತಣ್ಣೀರುಬಾವಿ, ಮುಹಮ್ಮದ್ ಬೊಬ್ಬಾಟಿ (ಕುದ್ರೋಳಿ) ಹಾಗೂ ಮಯ್ಯದ್ದಿಯಾಕ ಕಾಟಿಪಳ್ಳ ಮುಂತಾದವರು. ಇವರು ಮದುವೆ, ಮೊÊಲಾಂಜಿ ಸಮಾರಂಭಗಳಲ್ಲಿ, ಬೀಡಿಯ ಜಾಹೀರಾತುಗಳಿಗೆ, ಚುನಾವಣೆ ಸಂದರ್ಭಗಳಲ್ಲಿ ಹೀಗೆ ಸಿಕ್ಕಸಿಕ್ಕಲ್ಲಿ ಬ್ಯಾರಿ ಹಾಡುಗಳನ್ನು ರಚಿಸಿ, ಹಾಡಿ, ಬ್ಯಾರಿ ಸಾಹಿತ್ಯವನ್ನು ಪ್ರತಿರೋಧಗಳ ಮಧ್ಯೆಯೂ ಜೀವಂತವಾಗಿಡಲು ಹೋರಾಡಿದವರು. ೧೯೬೯ರಲ್ಲಿ ರಹೀಂ ಬಿ.ಸಿ.ರೋಡ್‌ರವರು ಮೊÊಲಾಂಜಿ ಕಾರ್ಯಕ್ರಮದಲ್ಲಿ ಹಾಡಿದ ‘ನಙಲೊ ಚಂದತ್ತೊ ಪುದಿಯಾಂಪುಲೆರೊ ಚಂದತ್ತೊ ಜಲ್ಸ್ರೊ ನಾಲ್’ ಅತ್ಯಂತ ಜನಪ್ರಿಯವಾಗಿ ಎಲ್ಲ ಸಮಾರಂಭಗಳಲ್ಲೂ ಇತರರೂ ಆ ಹಾಡನ್ನು ಹಾಡತೊಡಗಿದರು. ಹೀಗೆ ಬ್ಯಾರಿ ಮನೆಗಳಲ್ಲಿ, ಸಮಾರಂಭಗಳಲ್ಲಿ ಬ್ಯಾರಿ ಹಾಡು ಹೆಚ್ಚು ಜನಪ್ರಿಯವಾಗತೊಡಗಿತು.

೧೯೮೧ರಲ್ಲಿ ಬಂಟ್ವಾಳ ಬಿ.ಸಿ.ರೋಡ್‌ನಲ್ಲಿ ರವಿ ಎಲೆಕ್ಟಾçನಿಕ್ಸ್ನಲ್ಲಿ ರಹೀಂ ಬಿ.ಸಿ.ರೋಡ್‌ರವರ ಮೊದಲ ಬ್ಯಾರಿ ಹಾಡುಗಳ ಧ್ವನಿ ಸುರುಳಿ ಹೊರಬಂತು. ಅದರ ಹೆಸರು ‘ಇಂಗ್ಲಿಸ್ ಪಡ್ಚೊ ಪೆನ್ನ್’. ಆನಂತರ ಒಂದೆರಡು ವರ್ಷಗಳಲ್ಲಿ ಇದರ ಮಾಲಿಕೆಯಾಗಿ ೧೭ ಬ್ಯಾರಿ ಹಾಡುಗಳ ಧ್ವನಿ ಸುರುಳಿಗಳು ಹೊರಬಂದು ದಾಖಲೆ ಸ್ಥಾಪಿಸಿತು.

೧೯೮೩ರಲ್ಲಿ ಶಂಸುದ್ದೀನ್ ಮಡಿಕೇರಿಯವರ ‘ಪುದಿಯೊ ಬ್ಯಾರಿ ಪಾಟ್‌ಙ’ ಬ್ಯಾರಿ ಹಾಡುಗಳ ಧ್ವನಿ ಸುರುಳಿ ಮಂಗಳೂರು ಪುರಭವನದಲ್ಲಿ ಬಿಡುಗಡೆಯಾಯಿತು. ಈ ಧ್ವನಿಸುರುಳಿಯ ‘ತೆಂಙ್‌ಡೊ ತೋಟತ್ತ್ ಕಲಿಕ್ಂಬೊ’ ಎಂಬ ಹಾಡು ಈಗಲೂ ಜನಪ್ರಿಯವಾಗಿದೆ. ಅಂದು ಈ ಧ್ವನಿಸುರುಳಿಗೆ ಬಹಳಷ್ಟು ಪ್ರತಿರೋಧವೂ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಮೌಲವಿ ಮುಹಮ್ಮದಲಿಯವರು ‘ಬ್ಯಾರಿ ಬಾಸೆಲ್ ಇಲ್ಮಿ ಬೈತ್’ ಎಂಬ ಹಾಡುಗಳ ಧ್ವನಿ ಸುರುಳಿ, ೧೯೯೪ರಲ್ಲಿ `ಬ್ಯಾರಿಙ ಆರಙ’ ಎಂಬ ಭಾಷಣದ ಧ್ವನಿ ಸುರುಳಿ, ೧೯೯೬ರಲ್ಲಿ ‘ಲಾಇಲಾಹ ಇಲ್ಲಲ್ಲಾಹ್’ ಎಂಬ ಬ್ಯಾರಿ ಹಾಡುಗಳ ಧ್ವನಿ ಸುರುಳಿ ಹೊರತಂದರು. ಹಿರಿಯ ಸಾಹಿತಿ, ವಿದ್ವಾಂಸ ಅಬೂರೈಹಾನ ಅಹ್ಮದ್ ನೂರಿಯವರು ಬರೆದ ಹಲವಾರು ಬ್ಯಾರಿ ಹಾಡುಗಳು ಇಂದೂ ಬಹಳ ಜನಪ್ರಿಯವಾಗಿವೆ.

೯೦ರ ದಶಕದಲ್ಲಿ ಜನಪ್ರಿಯವಾದ ಕೆಲವು ಹಾಡುಗಳ ತುಣುಕುಗಳು ಈ ರೀತಿ ಇವೆ:

ಈ ದೇಶ ನಙಲೊ ಭಾರತ ನಂಕಿದ್ ಶಾಶ್ವತಾ ಕೈ ವಯತ್ ಇದ್‌ರೊ ರಕ್ಷೆಗ್ ಗೆಂದ್‌ರೊ ಖಂಡಿತಾ (ಇಬ್ರಾಹೀA ತಣ್ಣೀರುಬಾವಿ)

ಅಲ್ಲಾಹುರೊ ಅರಿಞÂರಾರಾ ಕುರ್‌ಆನ್‌ರೊ ತೆರಿಞÂರಾರಾ ಇಸ್ಲಾಮುಲು ನಡನ್‌ರಾರಾ ಈಮಾನ್‌ರೊ ಕರ್ದಿರಾರಾ (ಯು.ಎ. ಕಾಸೀಮ್ ಉಳ್ಳಾಲ)

ಪಂಡೊರು ಕಾಲತ್ತ್ ಪುದೆಪೆನ್ನ್….ಚಮಕ್‌ಂಬೊ ಎಂದೊರುಗಮ್ಮತ್ತ್ ಪಾಡ್ಯೋAಟಿನ್ನಾರ್ ಕೂಡಿಟ್ಟ್….ಪೆನ್ನಿಙ ಕೋಗಿಲೆ ರಾಗತ್ತ್ (ಮುಹಮ್ಮದ್ ಬಡ್ಡೂರು)

ಕಾಯಿನ್ತ್ಗ್ ಕೈನಾ ನೀಟ್ಂಬೊ ನಿಂಡೊ ಬಾಲ್‌ಬಾಟಿಯೊ ಸಂದೋಲಾ ಬಾಯಿಲ್‌ರೊ ಪಡಿ ನೀ ಇಲಿಯಿಂಬೊ ಈ ಕಲ್ಬುಲು ನೊರೋಡಿ ನೊಂಬಲಾ (ಹುಸೈನ್ ಕಾಟಿಪಳ್ಳ)

ಒನ್ನಾವೊನು ನಙ ಒನ್ನಾವೊನು ಬ್ಯಾರಿಙ ನಙ ಎಲ್ಲ ಒನ್ನಾವೊನು ಒನ್ನಾವೊನು ನಙ ಒನ್ನಾವೊನು ಇನ್ನೆಂಗುA ನಙ ಎಲ್ಲ ನಲ್ಲೇವೊನು (ಬಿ.ಎ. ಮುಹಮ್ಮದಲಿ)

ವರಙ್‌ಮ್ಮ ನೀನ್ ವರಙ್ ಬಂಗಾರ್ ವರಙ್‌ಲೆ ಕುಂಞÂ ವರಙ್‌ಮ್ಮಾ ಕೇಲಂಡ ಪುತ್ತೆ ನೀನಂಡೊ ಮುತ್ತೆ ವರಙ್‌ಲೆ ಕುಂಞÂ ವರಙ್‌ಮ್ಮಾ (ಮುಹಮ್ಮದ್ ಕುಳಾಯಿ)

ಮನ್ನ್ಗ್ ಮನ್ನ್ ದಿನ್ನಾಯಿಲ್ಲೆ ಪೆನ್ನ್ಗ್ ಪೆನ್ನ್ ದಿನ್ನೆöÊತ್ ದುನಿಯಾವೇ ಕಾನಾತೊ ಪೆನ್ನ್ ಕಿಡಾವುರೆ ಕೊಲ್ಲೊಗು ಕತ್ತೆರಿ ರೆಡಿಯಯಿತ್ (ಬಶೀರ್ ಅಹ್ಮದ್ ಕಿನ್ಯ)

ನಿಂಡೊ ಕನ್ನ್ಗ್ ಬೂನೊ ಕಾಟ, ನಿಂಡೊ ಕನ್ನ್ಗೇ ನೊಂಬಲ ಅಲ್ಲ ತಡಿಕುಂ ನೊಂಬಲ ಆವುರಾ. ನೀನ್ ದೀನ್ ಬುಟ್ಟು ಪೋಯೆಂಗ್ ಪೆತ್ತಙÉÆಗೇ ನೊಂಬಲ ಅಲ್ಲ, ಕೌಮುಗುಂ ನೊಂಬಲ ಆವುರು (ಅಶ್ರಫ್ ಅಪೋಲೊ)

ದಕ್ಷಿಣ ಕನ್ನಡ ಚಂದತ್ತೊ ರಾಯತ್ತ್ ಉಲ್ಲೊರು ನಲ್ಲೊ ಜನಾಂಗ ನೂರಾರ್ ವರ್ಸೆ ಮನಿಸರೊ ಮನಸ್‌ರೆ ಗೆಂದಿಯೊ ಬ್ಯಾರಿ ಜನಾಂಗ (ಶರೀಫ್ ನಿರ್ಮುಂಜೆ ಜೋಕಟ್ಟೆ)

೧೯೯೮ರ ನಂತರ ಬ್ಯಾರಿ ಹಾಡು, ಪ್ರಹಸನ, ಮತ ಪ್ರಸಂಗ, ಕಥಾ ಪ್ರಸಂಗಗಳ ಧ್ವನಿ ಸುರುಳಿಗಳಿಗೆ ಬಹಳಷ್ಟು ಬೇಡಿಕೆಗಳು ಬರಲಾರಂಭಿಸಿದುದರಿAದ ಬ್ಯಾರಿ ಧ್ವನಿ ಸುರುಳಿಗಳ ಸುರಿಮಳೆಯಾಗತೊಡಗಿತು. ಈ ಸಂದರ್ಭದಲ್ಲಿ ಬಿಡುಗಡೆಯಾದ ಹಲವು ಪ್ರಮುಖ ಧ್ವನಿ ಸುರುಳಿಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಬ್ಯಾರಿ ಹಾಡುಗಳ ಧ್ವನಿಸುರುಳಿ:

  • ಉಂಜಾಲ್ * ಚಂಙÁಯಿ * ಬ್ಯಾರಿ ಬೈಲ * ಬ್ಯಾರಿ ಮಸಾಲೆ * ದಾವತ್ತ್ * ನಿಖಾಹ್ * ಕೊಂಡಾಟ * ಬ್ಯಾರಿ ಮುತ್ತು * ಬಂಗಾರ್ ಚಿಟ್ಟೆ * ಚಿರಿ-ಕಲಿ * ಪೆರ್ನಾಲ್ ಕಿನಾವು ಗಿoಟ -೧+ಗಿoಟ-೨ +ಗಿoಟ-೩ * ಮಾಮಿರೊ ಮೋಲು * ಖಲ್ಬು * ಕಿನ್ಕಾಪು * ನೀನ್ * ಮಹರ್ * ನಿಕಾಯ್ತ್ * ಬೆಳ್ಳಿ ನಿಲಾವು * ಮುತ್ತು ಶುಹೂದ್ * ಬ್ಯಾರಿ ಬೀಟ್ಸ್ ಗಿoಟ – ೧ + ಗಿoಟ -೨+ಗಿoಟ -೩ * ಚೊಂಬಾಪು * ಚೆಡಿಲ್ * ಕಿರ್ಫ * ಮೊಬೈಲ್ ಝಮಾನ್ * ಚಂದ * ಕಮ್ಮನೆ * ಪೆರ್ನಾಲೊ ಮಾದ * ಮೈಮುನ
  • ಪಾಲುಂತೇನ್ * ಮರ್‌ಹಬ * ನೊಂಬಲ * ತಾಲ ಮ್ಯಾಲ * ನ್ಯಾರ್ಚೆತ್ತೊ ನಾಲ್ * ಈದ್ ಮುಬಾರಕ್ * ಪುಲಿಚಾರ್‌ಗ್ ಬಿಲಿಚಾರ್ * ಮಮ್ತಾಝ್ * ಮೈಕಾಲ್ತೊ ಮರ್ಮೋನು * ಮಿಸ್‌ಕಾಲ್ * ಬಿಯ್ಯಾರ * ನಾಸಿಯಾ * ಅಗ್‌ಚುತ್ತು ಮನಿಮುತ್ತು * ಏಕಾಕಾ ಏದಾದಾ * ಮಾಫಿ ಮುಷ್ಕಿಲ್ * ಬ್ಯಾರಿ ಪಾಟ್‌ಙ * ಬ್ಯಾರಿ ಕ್ಲಾಸಿಕ್ ಹಿಟ್ಸ್ * ಬ್ಯಾರಿ ಸೂಪರ್ ಹಿಟ್ಸ್ * ಸಂದೋಲ * ಇಂಗ್ಲಿಸ್ ಪಡ್ಚೊ ಪೆನ್ನ್ * ಮೆಹೆರಾಜ್ ಜಾವು * ಆಗಾಸೆ ಭೂಮಿ * ದುನಿಯಾವುಗು ಬನ್ನೊನಾಲ್ * ಉಮ್ಮ ಪಿರ್ಸತ್ತ್ಲ್ * ಮುತ್ತು ಮಾಲೆ * ಕೊÊಲಾಂಡಿ ಕಾಕಾ * ಮಿಸ್‌ರ್ ಮಾಲೆ * ಮಾಮಿರೊ ಚಮ್ಮನ
  • ಪೊದುರೊ ದಲಾಲಿ * ಪಿರ್ಸತ್ತೊ ಮುತ್ತು * ಬಂಗಾರ್ ಮನಸ್ಸ್ * ಚಮ್ಮಂತೊ ಚೋರು * ಪಿರ್ಸಪ್ಪಾಡ್ * ಕಲ್ಬುರೊ ನೊಂಬಲ * ಅಸರ್ ಗಿoಟ-೧+ಗಿoಟ-೨ * ಕಮರ್ * ದಿನಾರ್ * ಬಿರ್‌ಂದರ್ * ಒರ್ಮತ್ತ್ * ಮದ್‌ಹ್ ಪಾಟ್ * ತಮಾಸೆ * ಪೊಂಚಿರಿಕೆ * ಜರಾದ್ * ಬೆಳ್ಳಿ ನಿಲಾವು * ಭಾರತ್ ಬಂದೈತ್ * ಮೊಬೈಲ್ ಪೋನ್ * ಝಂ ಝಂ * ಬೆಲಿಯೊ ಪೆರ್ನಾಲ್ * ಬೇಲೂರೊ ಹಾಜಾಕ * ಕಂಡ್‌ತ್ತ್ಮಾದ * ಅಲಿಕಾತ್ * ಉರುಮಾಲ್ * ಮಿನಾರ * ಮರ್ಹಬ * ಮಹರ್ * ಮಸ್ಕತ್‌ಗೊರು ಕಲ್ಲಾಸ್ * ದುನಿಯಾವುರೊ ಗುಲ್‌ಮಾಲ್ * ನಿಲಾವು * ಕಿನಾವು * ಪೆರ್ನಾಲ್ * ಶವ್ವಾಲ್ ಪೆರ್ನಾಲ್ * ಕಾಜೂರು * ಉಳ್ಳಾಲ * ಕನ್ನಂಗಾರ್ * ಮಂಜನಾಡಿ * ಇಂಡತ್ತೊ ಸಂದೋಲ * ಮನಸ್‌ಲೊರು ಪೆನ್ನ್ * ಪೆರ್ನಾಲ್ ಕಿನಾವು * ಇಶಲ್ ಪೆರ್ನಾಲ್ * ಪೆರ್ನಾಲ್ ಸಮ್ಮಾನ * ಫಾತಿಮಾ * ದುಲ್ಫಕರ್ * ಮರ್‌ಹಬ * ಮಶ್‌ಅದ * ಸಫಾ ಮರ್‌ವಾ * ಕನ್ನಂಗಾರ್‌ಲೆ ವೊಂಗಾವನಮ್ * ಕಾಜೂರಿಂಡೆ ಪೊಂಗಾವನಮ್ * ಕೊಸಿಗಮ್ಮತ್ತ್ * ಗಮ್ಮತ್ತ್ರೊ ನಾಲ್ * ಜೈಭಾರತ್ * ಸಾನೂರಿಲೆ ಮಕ್‌ಬರಾ * ಮೂಳೂರಿಲೆ ಮಕ್‌ಬರಾ * ದಿಲ್ ಹೈ ಸಾನಿಬಾ * ಕಡಲ್‌ತೆರೆ * ಬ್ಯಾರಿ ಬಾಯ್ಸ್ * ಮಹರ್‌ಮಾಲೆ * ಯಾಮುಸ್ತಫ * ತೊಟ್ಟಿಲ್ * ಅಜಬ್‌ರೊ ಪೆನ್ನ್ * ಪೌನಾಲ್ ಮಾದ * ಪೆರ್ನಾಲ್ ತಿರಿ * ನಸೀಯತ್ * ತಲೆ ಸಿಂಗಾರ * ನಿಲಾವು * ಕಿನಾವುಡೊ ಪೆನ್ನ್ * ನೆನಲ್ * ಶವ್ವಾಲ್ ನಿಲಾವು * ಪುದೆಪೆನ್ನ್ * ಕಿನಾವುರೊ ರಾನಿ * ಪೂಬಲ್ಲಿ * ಪಿರ್ಸಪ್ಪಾಡ್ * ಒರ್ಮತ್ತ್ರೊ ನಾಲ್ * ನಂಡೊ ಪೆಂಙಲ್ * ಖಲ್ಬುರೊ ನೊಂಬಲ * ಉಮ್ಮರೊ ಸಂದೋಲ * ನಿಂಡೊ ನೆನಪುಲೆ * ನಿಲಾವು * ನೇರ ನಿಲಾವು * ಕೇಲಂಡ ಮಕ್ಕಲೆ ಕೇಲಂಡ * ನಙಲೊ ರಾಯ

ದಪ್ಪು ಹಾಡುಗಳು

ಮರ್ಕಝ್ * ರಾಹತ್ತ್ * ನಸೀಯತ್ ಮಜ್ಲಿಸ್ * ಬ್ಯಾರಿ ದಪ್ಪು ಪಾಟ್‌ಓ

ಬ್ಯಾರಿ ಹಾಡುಗಳು

  • ಸುರ್ಮತ್ತೊ ಕನ್ನ್ * ಶವ್ವಾಲ್ ನಿಲಾವು * ಏ ಮನಸೇ * ಪೆರ್ನಾಲ್ ಸಂದೋಲ ಗಿoಟ-೧+ ಗಿoಟ-೨+ಗಿoಟ-೩+ಗಿoಟ-೪ * ಈದ್ ಮುಬಾರಕ್ ಗಿoಟ-೧+ಗಿoಟ-೨ * ಮೈಕಾಲ್ತೊ ರಾಜ.

ರಂಗ ಪ್ರದರ್ಶನಗೊಂಡ ಬ್ಯಾರಿ ನಾಟಕಗಳು

  • ಚೆಲ್ಡೆöÊಕಲ್ಲ ಚೆನ್ನೆಂಗ್ ಬೇಜಾರಾವು * ಕುರ್ಫಾತ್ ಕಟ್ಟೆ * ಬಿರ್‌ಂದರ್ * ಕುಂಞÁಲಿ ಎಂಬಿಬಿಎಸ್ * ಕಾಸಿಲ್ಲೆಂಗ್ ಆರುಂ ಇಲ್ಲೆ * ಪೋಕರಾಕೊಗು ಪುರ್ಸೊತ್ತಿಲ್ಲೆ * ತಾಲೋಲಂ ತಾಲೋಲಂ * ಪಾಲುಂತೇನುA * ಓದಿ ಬಾನಿಯಾ * ದಮ್ ಬಿರಿಯಾನಿ

ಕಥಾ ಪ್ರಸಂಗ : * ತಲಾಖ್

ಬ್ಯಾರಿ ಪ್ರಹಸನ : * ಮಂಙÂಲ * ಪಿರ್ಸ * ವಸೀಯತ್ * ಮಿಸ್ಟರ್ ಪುತ್ತಾಕ * ಹಾಮದಾಕರೂ ಚಿರಿ

ಮೇಲೆ ಕಾಣಿಸಿರುವ ಬ್ಯಾರಿ ಹಾಡುಗಳ ಧ್ವನಿ ಸುರುಳಿಗಳಿಗೆ ಅತಿ ಹೆಚ್ಚು ಸಾಹಿತ್ಯ ಹಾಗೂ ಧ್ವನಿ ನೀಡಿದವರೆಂದರೆ ಹುಸೈನ್ ಕಾಟಿಪಳ್ಳ ಮತ್ತು ರಹೀಂ ಬಿ.ಸಿ.ರೋಡು. ಬಶೀರ್ ಅಹ್ಮದ್ ಕಿನ್ಯ, ಅಶ್ರಫ್ ಅಪೋಲೋ, ಶೌಕತ್ ಪಡುಬಿದ್ರಿ, ಶಮೀರ್ ಮುಲ್ಕಿ, ಶರೀಫ್ ನಿರ್ಮುಂಜೆ ಜೋಕಟ್ಟೆ ಇವರೂ ಹಲವಾರು ಧ್ವನಿ ಸುರುಳಿಗಳಿಗೆ ಸಾಹಿತ್ಯ ರಚಿಸಿ ಹಾಡಿದ್ದಾರೆ.

ರಹೀಂ ಉಚ್ಚಿಲ್, ಇಸ್ಮಾಈಲ್ ಮೂಡುಶೆಡ್ಡೆ, ಅಬ್ದುಲ್ ಅಝೀಝ್ ಬೈಕಂಪಾಡಿ, ಯು.ಎ. ಕಾಸೀಮ್ ಉಳ್ಳಾಲ, ಇಬ್ರಾಹೀಂ ತಣ್ಣೀರುಬಾವಿ, ಎಂ.ಜಿ. ರಹೀಂ ಇವರೆಲ್ಲ ಬ್ಯಾರಿ ಕಿರುಚಿತ್ರ, ಪ್ರಹಸನ, ರಂಗಭೂಮಿಗಳಿಗೆ ಕಥೆ, ಸಾಹಿತ್ಯ, ಸಂಗೀತ, ನಿರ್ದೇಶನ, ನಿರ್ಮಾಣದ ಮೂಲಕ ದುಡಿದವರು.

ವ್ಯಾಪಾರ, ಉದ್ಯೋಗ ಅರಸಿಕೊಂಡು ಹೋಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಬ್ಯಾರಿಗಳು, ಪರಸ್ಪರ ಸಂಪರ್ಕಕ್ಕಾಗಿ ೧೯೮೬ರಲ್ಲಿ ‘ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್’ ಎಂಬ ಸಂಘಟನೆಯೊAದನ್ನು ಕಟ್ಟಿಕೊಂಡರು. ಇದು ಬ್ಯಾರಿಗಳ ಪ್ರಪ್ರಥಮ ಬ್ಯಾರಿ ಸಂಘಟನೆ. ಇತಿಹಾಸದ ಪುಟದಿಂದ ಅಳಿಸಿಹೋಗುವ ಹಂತದಲ್ಲಿದ್ದ ‘ಬ್ಯಾರಿ’ ಪದ ಮತ್ತೊಮ್ಮೆ ಬೆಳಕಿಗೆ ಬಂದದ್ದು ಈ ಸಂಘಟನೆಯ ಮೂಲಕ. ಈ ಸಂಘಟನೆಯವರು ಹಮ್ಮಿಕೊಳ್ಳುತ್ತಿದ್ದ ‘ಕುಟುಂಬ ಮಿಲನ’, ‘ವಾರ್ಷಿಕೋತ್ಸವ’ ಇತ್ಯಾದಿ ಕಾರ್ಯಕ್ರಮಗಳಲ್ಲಿ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೀಜ ಮತ್ತೊಮ್ಮೆ ಮೊಳಕೆಯೊಡೆಯಲು ಪ್ರಾರಂಭವಾಯಿತು. ಅವರು ಪ್ರಾರಂಭಿಸಿದ ‘ಬ್ಯಾರಿ ಟೈಮ್ಸ್’ ಕಿರು ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದ ಬ್ಯಾರಿ ಒಗಟುಗಳು, ಗಾದೆಗಳು, ಹಾಸ್ಯ, ಚುಟುಕುಗಳು ಬ್ಯಾರಿ ಮುದ್ರಣ ಸಾಹಿತ್ಯಕ್ಕೆ ನಾಂದಿಯಾಯಿತು. ಈ ಸಂಘಟನೆಯ ದಶಮಾನೋತ್ಸವದ ಸಂಭ್ರಮಕ್ಕಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ೧೯೯೭ ಡಿಸೆಂಬರ್ ೧೩-೧೪ರಂದು ನಡೆದ ೨ ದಿನಗಳ ಐತಿಹಾಸಿಕ ಪ್ರಪ್ರಥಮ ಬ್ಯಾರಿ ಸಮ್ಮೇಳನ ಬ್ಯಾರಿಗಳಲ್ಲಿ ಸುಪ್ತವಾಗಿ ಹುದುಗಿದ್ದ ಬ್ಯಾರಿ ಸಾಹಿತ್ಯದ ಆಂದೋಲನಕ್ಕೆ ಕಾರಣವಾಯಿತು. ಅಂದು ಬಿಡುಗಡೆಗೊಂಡ ಡಾ. ಸುಶೀಲಾ ಪಿ. ಉಪಾಧ್ಯಾಯರ ‘ಬ್ಯಾರಿ ಭಾಷೆ ಮತ್ತು ಜನಪದ ಕಥೆಗಳು’ ಎಂಬ ಸಂಕಲನ, ಅಬುಲ್ ಹಸನ್ ಮೌಲವಿಯವರ ‘ಮುತ್ತುಮಾಲೆ’ ಎಂಬ ಕೃತಿ, ಸಂಘಟನೆಯ ಸ್ಮರಣ ಸಂಚಿಕೆ, ಹಾಡು, ನಾಟಕಗಳ ಧ್ವನಿ ಸುರುಳಿಗಳು, ಅರ್ಥಪೂರ್ಣ ವಿಚಾರಗೋಷ್ಠಿ, ಕವಿಗೋಷ್ಠಿ ಬ್ಯಾರಿ ನಾಟಕಗಳು ಬ್ಯಾರಿ ಸಾಹಿತ್ಯದ ಪುನರ್ಜನ್ಮಕ್ಕೆ, ಬ್ಯಾರಿ ಮುದ್ರಣ ಸಾಹಿತ್ಯದ ಉಗಮಕ್ಕೆ ಪ್ರೇರಕವಾಯಿತು.

ಈ ಸಮ್ಮೇಳನದಿಂದ ಪ್ರೇರಣೆಗೊಂಡ ದ.ಕ. ಜಿಲ್ಲೆಯ ಸಾಹಿತ್ಯಾಸಕ್ತರು ೧೯೯೮ರಲ್ಲಿ ಮಂಗಳೂರಿನ ಬೈಕಂಪಾಡಿಯ ಬಂಟ್ವಾಳ್ ಚೇಂಬರ್ಸ್ನಲ್ಲಿ ‘ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ’ ಎಂಬ ಸಂಘಟನೆಯೊAದನ್ನು ಕಟ್ಟಿಕೊಂಡರು. ಬಶೀರ್ ಬೈಕಂಪಾಡಿ ಈ ಸಂಘಟನೆಯ ಸ್ಥಾಪಕಾಧ್ಯಕ್ಷರಾಗಿದ್ದು, ಇಬ್ರಾಹೀಂ ತಣ್ಣೀರುಬಾವಿ, ಯು.ಎ. ಕಾಸೀಮ್ ಉಳ್ಳಾಲ, ಖಾಲಿದ್ ತಣ್ಣೀರುಬಾವಿ, ರಹೀಂ ಉಚ್ಚಿಲ್, ಉಮರ್ ಯು. ಎಚ್. ಹುಸೈನ್ ಕಾಟಿಪಳ್ಳ, ಶರೀಫ್ ನಿರ್ಮುಂಜೆ, ಅಥಾವುಲ್ಲ ಜೋಕಟ್ಟೆ, ಮುಹಮ್ಮದ್ ಕುಳಾಯಿ ಹಾಗೂ ಬಿ.ಎ. ಮುಹಮ್ಮದಲಿ ಸದಸ್ಯರು.

ಈ ಸಂಘಟನೆಯವರು ನಾಡಿನ ಸಾಹಿತಿಗಳು, ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿ ರಚಿಸಿ ೧೯೯೮ ನವೆಂಬರ್ ೧೧ರಂದು ಮಂಗಳೂರು ಪುರಭವನದಲ್ಲಿ ಬಿ.ಎಂ. ಇದಿನಬ್ಬರ ಅಧ್ಯಕ್ಷತೆಯಲ್ಲಿ ನಡೆಸಿದ ‘ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನ’ ಬ್ಯಾರಿ ಸಾಹಿತ್ಯದ ಇತಿಹಾಸದಲ್ಲೊಂದು ಮೈಲಿಗಲ್ಲು. ಈ ಸಮ್ಮೇಳನದ ಪ್ರಚಾರಕ್ಕಾಗಿ ಬ್ಯಾರಿ ಯುವ ಸಮೂಹವೊಂದು ಜಿಲ್ಲೆಯಾದ್ಯಂತ ನಡೆಸಿದ ಬ್ಯಾರಿ ಕವಿಗೋಷ್ಠಿಗಳು, ಪ್ರಕಟಿಸಿದ ಕರಪತ್ರಗಳು, ಪ್ರಚಾರದ ಹಾಡುಗಳು, ಜಾಗೃತಿ ಗೀತೆಗಳು, ಬ್ಯಾರಿ ಸಾಹಿತ್ಯ ಆಂದೋಲನದ ಕಿಡಿಯನ್ನು ಹಳ್ಳಿಹಳ್ಳಿಗಳಿಗೆ ಪಸರಿಸುವಂತೆ ಮಾಡಿತು. ಈ ಸಂಘಟನೆಯವರು ಸಂಪೂರ್ಣ ಬ್ಯಾರಿ ಭಾಷೆಯಲ್ಲಿ ಪ್ರಾರಂಭಿಸಿದ ಸಾಹಿತ್ಯಕ ಮಾಸಪತ್ರಿಕೆ ‘ಬ್ಯಾರಿ ವಾರ್ತೆ’ ನೂರಾರು ಬ್ಯಾರಿ ಭಾಷೆಯ ಬರಹಗಾರರ ಸೃಷ್ಟಿಗೆ ಕಾರಣವಾಯಿತು. ಹಾಗೂ ವೇದಿಕೆಯಾಯಿತು.

ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯನ್ನು ವಿಸರ್ಜಿಸಿ ೧೯೯೮ರಲ್ಲಿ ಅದನ್ನೇ ಒಂದು ಸಂಘಟನೆಯಾಗಿ ಸ್ಥಾಪಿಸಿ ‘ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್’ ಎಂದು ನಾಮಕರಣ ಮಾಡಲಾಯಿತು. ಈ ಸಂಘಟನೆಯ ವತಿಯಿಂದ ನವೆಂಬರ್ ೨೧, ೧೯೯೯ರಲ್ಲಿ ಬಂಟ್ವಾಳದ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ಗೋಳ್ತಮಜಲ್ ಅಬ್ದುಲ್ ಖಾದರ್ ಹಾಜಿ ಅಧ್ಯಕ್ಷತೆಯಲ್ಲಿ ೨ನೇ ಬ್ಯಾರಿ ಸಾಹಿತ್ಯ ಸಮ್ಮೇಳನ, ಅಕ್ಟೋಬರ್ ೨೮, ೨೦೦೧ರಲ್ಲಿ ಉಡುಪಿ ಉದ್ಯಾವರದ ಹಲೀಮಾ ಸಾಬ್ಜ್ ಸಭಾಂಗಣದಲ್ಲಿ ಪ್ರೊ| ಬಿ.ಎಂ. ಇಚ್ಲಂಗೋಡ್‌ರ ಅಧ್ಯಕ್ಷತೆಯಲ್ಲಿ ೩ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಹಾಗೂ ಫೆಬ್ರವರಿ ೨೭, ೨೦೦೭ರಲ್ಲಿ ಚಿಕ್ಕಮಗಳೂರಿನ ಒಕ್ಕಲಿಗರ ಭವನದಲ್ಲಿ ಫಕೀರ್ ಮುಹಮ್ಮದ್ ಕಟ್ಪಾಡಿ ಅಧ್ಯಕ್ಷತೆಯಲ್ಲಿ ೪ನೇ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಸಲಾಯಿತು.

ಬ್ಯಾರಿಗಳ ನಿರಂತರ ಹೋರಾಟದ ಫಲವಾಗಿ ಅಕ್ಟೋಬರ್ ೩, ೨೦೦೭ರಂದು ಜೆಡಿಎಸ್ – ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ, ಶ್ರೀ ಎಚ್.ಡಿ. ಕುಮಾರ ಸ್ವಾಮಿಯವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಆದೇಶ ಹೊರಡಿಸಿದರು.

ಬ್ಯಾರಿ ಭಾಷೆ, ಸಾಹಿತ್ಯ, ಇತಿಹಾಸಕ್ಕೆ ಸಂಬAಧಪಟ್ಟAತೆ ಇಂಗ್ಲಿಷ್, ಕನ್ನಡ ಮತ್ತು ಬ್ಯಾರಿ ಭಾಷೆಯಲ್ಲಿ ಇದುವರೆಗೆ ಸುಮಾರು ೨೦ ಲೇಖಕರು ಮತ್ತು ಇಬ್ಬರು ಲೇಖಕಿಯರ ಒಟ್ಟು ಅಂದಾಜು ೩೯ ಕೃತಿಗಳು ಹೊರಬಂದಿವೆ. ಈ ಪೈಕಿ ವಿವಿಧ ಲೇಖಕ, ಲೇಖಕಿಯರು ಬರೆದ ಮೂರು ಕೃತಿಗಳ ಸಂಪಾದನೆಯೂ ಸೇರಿದೆ. ಅಧ್ಯಯನ, ಕಾದಂಬರಿ, ಕಥಾ ಸಂಕಲನ, ಅನುವಾದ, ಇಸ್ಲಾಮೀ ಸಾಹಿತ್ಯ, ಇತಿಹಾಸ, ಒಗಟು, ಗಾದೆಗಳು, ನುಡಿಮುತ್ತುಗಳು, ಹಾಡು, ಜನಪದ ಕತೆಗಳು, ಮೆಸೇಜ್ ಸಂಗ್ರಹ ಇತ್ಯಾದಿ ಕೃತಿಗಳು. ಅವುಗಳಲ್ಲಿ ಪ್ರಮುಖ ಕೃತಿಗಳನ್ನು, ಲೇಖಕರ ಹೆಸರು ಸಹಿತ ಇಲ್ಲಿ ದಾಖಲಿಸುತ್ತಿದ್ದೇನೆ.

ಡಾ. ವಹಾಬ್ ದೊಡ್ಡಮನೆ : ಮುಸ್ಲಿಮ್ ಇನ್ ದಕ್ಷಿಣ ಕನ್ನಡ (೧೯೯೩), ಇಂಗ್ಲಿಷ್ -ಕನ್ನಡ -ಬ್ಯಾರಿ ಅರ್ಥಕೋಶ (೧೯೯೭), ಓದು ಕಿಡಾವು ಓದು (೨೦೦೭), ತುಳುನಾಡಿನ ಮುಸ್ಲಿಮರು (೨೦೦೮)

ಡಾ. ಸುಶೀಲಾ ಪಿ. ಉಪಾಧ್ಯಾಯ : ಬ್ಯಾರಿ ಭಾಷೆ ಮತ್ತು ಜನಪದ ಕತೆಗಳು (೧೯೯೭), ದಿ. ಬ್ಯಾರಿ ಲ್ಯಾಂಗ್ವೇಜ್ (೨೦೧೧), ಬ್ಯಾರಿ ಭಾಷೆ (೨೦೧೧)

ಅಬೂರೈಹಾನ ಅಹ್ಮದ್ ನೂರಿ : ಮೈಕಾಲ (೧೯೬೦, ೧೯೯೭)

ಪ್ರೊ| ಬಿ.ಎಂ. ಇಚ್ಲಂಗೋಡು : ತುಳುನಾಡ ಮುಸ್ಲಿಮರು (೧೯೯೭), ದಿ ಬ್ಯಾರಿ ಆಫ್ ತುಳುನಾಡು (೨೦೧೧)

ತುಫೈಲ್ ಮುಹಮ್ಮದ್ : ತುಳುನಾಡ ಬ್ಯಾರಿಗಳು (ಅನುವಾದ ೨೦೧೧)

ಯು.ಎ. ಕಾಸೀಮ್ ಉಳ್ಳಾಲ : ಚೆಲ್ತೊನ್ನು ಚೇಲೊನ್ನು (೧೯೯೮), ವೀಡಿಯೋ ಕ್ಯಾಸೆಟ್ (೨೦೦೪), ತರವಾಡ್ (೨೦೧೦), ನಿಸ್ಕಾರತ್ತೊ ಕ್ರಮ, ಅದ್‌ಲ್ ಚೆಲ್ರದ್ ಪಿನ್ನೆ ಅದ್ರೊ ಅರ್ಥ (೨೦೦೫)

ಇಬ್ರಾಹೀಂ ತಣ್ಣೀರುಬಾವಿ : ತನಲ್ (೨೦೦೫), ನೆನಲ್ (೨೦೧೦), ಸಾವುಂಞÁಕರೊ ಸಾಲೆ (೨೦೧೧), ಇಸ್ರಾಫ್ (೨೦೧೨)

ಇಬ್ರಾಹೀಮ್ ತಣ್ಣೀರುಬಾವಿ, ಹುಸೈನ್ ಕಾಟಿಪಳ್ಳ : ದಪ್ಪುರೊಪಾಟ್ (೨೦೧೦)

ಎಂ.ಬಿ. ಅಬ್ದುಲ್ ರಹ್‌ಮಾನ್ : ಪೊಂಚಿರಿ (೧೯೯೮)

ಮುಹಮ್ಮದ್ ಬಡ್ಡೂರು : ಕಮ್ಮನೆ (೧೯೯೯)

ಮುಹಮ್ಮದಲಿ : ಯಾಸೀನ್ (೨೦೦೦)

ಮುಹಮ್ಮದ್ ತಣ್ಣೀರುಬಾವಿ : ಬ್ಯಾರಿ ಚೆಲ್ತ್ (೨೦೦೯)

ರಝಿಯ ಎಸ್.ಜೆ.ಬಿ. : ಯರ್ಚಿಗೆಟ್ಟೆರೊ ಕಥೆ (೨೦೦೭)

ಹುಸೈನ್ ಕಾಟಿಪಳ್ಳ : ಬ್ಯಾರಿ ಕ್ಯಾಸೆಟ್‌ರೊ ಪಾಟ್‌ಙ (೨೦೦೩), ಬಿರ್‌ಂದ (೨೦೦೭), ಮೊÊಲಾಂಜಿ (೨೦೧೦)

ಹಂಝ ಮಲಾರ್ : ಮೊÊಲಾಂಜಿ (೧೯೯೬, ೧೯೯೭), ಬ್ಯಾರಿ ಮುಸ್ಲಿಮರು (೨೦೦೧), ಒರು ಪೆನ್ನ್ರೆ ಕಿನಾವು (೨೦೦೧), ತಲ್ಲಣ (೨೦೦೪), ಪಾಲುಂತೇನ್ (೨೦೦೫), ಕನ್ತನ್ನಿ (೨೦೦೮), ಮುತ್ತು ನೆಬಿರೊ ಪಲಕ (೨೦೦೯)

ಮುಹಮ್ಮದ್ ಕುಳಾಯಿ : ಪೆರ್ನಾಲ್ (೧೯೯೮), ಬ್ಯಾರಿ ಬಾಸೆಲ್ ಅರೆಬಿಯನ್ ನೈಟ್ಸ್ (೨೦೧೧)

ಅಝೀಝ್ ಬೈಕಂಪಾಡಿ : ಕಾರ್‌ನೂರು (೨೦೧೨), ದಮ್ ಬಿರಿಯಾನಿ (೨೦೧೨), ಓದಿ ಬಾನಿಯ (೨೦೧೨)

ಅಬುಲ್ ಹಸನ್ ಮೌಲವಿ : ಮುತ್ತು ಮಾಲೆ (೧೯೯೭)

ಬಿ.ಎ. ಮುಹಮ್ಮದ್ ಹನೀಫ್ : ಬ್ಯಾರಿ ಆಂದೋಲನದ ಹೆಜ್ಜೆಗಳು (೨೦೦೮)

ವಿವಿಧ ಲೇಖಕರು : ಪೂಮಾಲೆ (೨೦೧೦), ಬ್ಯಾರಿ ಅಧ್ಯಯನ (೨೦೦೮), ಮೆಲ್ತಿರಿ (೧೯೯೯), ದುನಿಯಾವು (೧೯೯೮), ಕಿನಾವು (೧೯೯೯), ಪೆರಿಮೆ (೨೦೧೧)

ಶಮೀಮ್ ಕುಟ್ಟಿಕಳ : ಪಿರ್ಸಪ್ಪಾಡ್ (೨೦೦೮)

ಅಶ್ರಫ್ ಅಪೋಲೋ : ಪಿರ್ಸಪ್ಪಾಡ್ (೨೦೦೮)

ಎನ್.ಎಮ್. ಹನೀಫ್ ಪರ್ಲ್ಯ, ಹನೀಫ್ ಪರ್ಲ್ಯ : ನಲ್ಲೊತೆರು (೨೦೦೮)

ಕೆ.ಪಿ. ಎ. ಖಾದರ್ ಕುತ್ತೆತ್ತೂರು : ನಲ್ಲೊ ತೆರು (೨೦೧೦)

ಬಶೀರ್ ಕಿನ್ಯ : ಕೊತ್ತಿಪೂ (೨೦೦೮), ಬಶೀರ್ ಕಿನ್ಯ ಎಲ್ದಿಯೊ ಪಾಟ್‌ಙ

ಆಲಿಯಬ್ಬ ಜೋಕಟ್ಟೆ : ನಂಡೊ ರಾಯ ನಂಡೊ ಸಂಸ್ಕೃತಿ (೨೦೧೦)

ಝುಬೇದ ಗುರುಪುರ : ಕಾಲಡಿರೊ ಸ್ವರ್ಗ (೨೦೧೦)

ಫಕ್ರುದ್ದೀನ್ ಇರುವೈಲ್ : ನೊಂಬಲ (೨೦೧೦)

ಅಬ್ದುಲ್ ರಹೀಂ ಟೀಕೆ : ಮಲ್ಲಿಗೆ ಬಲ್ಲಿ (೨೦೧೪)

ಎಂ.ಪಿ. ಹಸನ್ ಮುಕ್ಕ : ಬ್ಯಾರಿಙ ಭಾರೀ ನಲ್ಲಙ (೨೦೦೬)

ಎಂ.ಪಿ. ಹಸನ್ ಮುಅಲ್ಲಿಂ : ಪಿರ್ಸ, ಪಿರ್ಸ, ಪಿರ್ಸ (೨೦೧೧)

ಅಬ್ದುಲ್ ಖಾದರ್ ಕೃಷ್ಣಾಪುರ : ಸಂದೋಲ (೨೦೧೨)

ಅಕ್ಬರ್ ಅಲಿ ಕಾವಳ ಕಟ್ಟೆ : ಮರಿಪ್ಪು (೨೦೧೨)

ಅಬ್ದುಲ್ ಸತ್ತಾರ್ : ಚಂಙÁಯಿ (೨೦೧೨)

ಮುಹಮ್ಮದ್ ತೌಸೀಫ್ : ಪೆನ್ನ್ ಪೆತ್ತೋಲೊ ಸೊಬುರು, ಆನ್ ಪೆತ್ತೋಲೊ ಕೆಬುರು (೨೦೧೨)

ಇಸ್ಮಾಈಲ್ ಮೂಡುಶೆಡ್ಡೆ : ಮೈಸೂರು ಪಿಲಿ ಟಿಪ್ಪು (೨೦೦೮), ಬಿರ್‌ಂದರ್ (೨೦೧೧)

೨೦೧೧ರಲ್ಲಿ ಬ್ಯಾರಿ ಭಾಷೆಯಲ್ಲೇ ನಿರ್ಮಾಣಗೊಂಡು ಬಿಡುಗಡೆಯಾದ ಪ್ರಪ್ರಥಮ ಚಲನಚಿತ್ರ ‘ಬ್ಯಾರಿ’ ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಬೆಳವಣಿಗೆ. ಈ ಚಲನಚಿತ್ರಕ್ಕೆ ೫೯ನೇ ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ ‘ಸ್ವರ್ಣಕಮಲ’ ಲಭಿಸುವುದರೊಂದಿಗೆ ಬ್ಯಾರಿ ಭಾಷೆ, ಸಂಸ್ಕೃತಿ, ಜನಾಂಗ ಜಗತ್ತಿಗೇ ಪರಿಚಯಿಸಲ್ಪಟ್ಟಿತು. ಮಂಗಳೂರು ಕಾಟಿಪಳ್ಳ, ಚೊಕ್ಕಬೆಟ್ಟುವಿನವರಾದ ಅಲ್ತಾಫ್ ಹುಸೈನ್ ಈ ಚಿತ್ರವನ್ನು ಹೊರತರುವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಹಾಗೆಯೇ ‘ಮಾಮಿಮರ್ಮೋಲು’ ರಹೀಂ ಉಚ್ಚಿಲ್‌ರವರ ಬ್ಯಾರಿ ಭಾಷೆಯ ಪ್ರಥಮ ಕಿರುಚಿತ್ರ.

೭೦ರ ದಶಕದಲ್ಲಿ ‘ಬ್ಯಾರಿ’ ಎಂದು ಗುರುತಿಸಿಕೊಳ್ಳಲು ಮುಜುಗರ-ನಾಚಿಕೆ ಪಟ್ಟುಕೊಳ್ಳುತ್ತಿದ್ದ ಬ್ಯಾರಿಗಳು ಇಂದು ತಮ್ಮ ಎಲ್ಲ ಕೀಳರಿಮೆಗಳನ್ನು ಬಿಟ್ಟು ಮೈಕೊಡವಿ ಎದ್ದು ನಿಂತಿದ್ದಾರೆ. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಕಂಪನ್ನು ನಾಡಿನೆಲ್ಲೆಡೆ ಪಸರಿಸಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Scroll to Top