Dr. K.M. Muhammad Parliya

03/10/1942 – 22/05/2023

Dr. K.M. Muhammad, affectionately known as “Mammodu Doctor,” was born on October 3, 1942, to Kodi Kunhali and Rahima in Kandal near Perla, close to Vitla in Bantwala Taluk. He completed his primary and secondary education in his village, pursued PUC in Kasargod, and graduated from the CGIM medical course in 1966 from Government College, Mysore.

Dr. Muhammad initially worked at Father Muller Hospital in Mangalore and later ran a clinic in Ullala, Panemangalore near Aladka. In 1985, he established Perla Nursing Home near BC Road, where he served as owner and managing director along with his wife Maimuna, a gynecologist at the same nursing home. Dr. Muhammad garnered recognition for their compassionate service to thousands of patients.

A humble individual, Dr. Muhammad valued education highly and often assisted students facing financial difficulties in continuing their studies. His commitment to social service extended to his role as president of Mittabail Juma Masjid and as Chairman of the Netaji Subhash Chandra Bose Government School Development Committee in Kodangai. Additionally, he was active in the Bantwala Taluk Seerat Committee.

Dr. K.M. Muhammad passed away on May 22, 2023, at his home in Perla after an eight-year illness. He is survived by his wife, three sons, and a daughter.


ಪರ್ಲಿಯಾ ನರ್ಸಿಂಗ್ ಹೋಮ್‌ನ ಆಡಳಿತ ನಿರ್ದೇಶಕ ಡಾ. ಕೆ.ಎಂ. ಮುಹಮ್ಮದ್

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರ್ಲ ಬಳಿಯ ಕಂದಲ್ ಎಂಬಲ್ಲಿ ಕೋಡಿ ಕುಂಞಾಲಿ-ರಹೀಮಾ ದಂಪತಿಯ ಪುತ್ರನಾಗಿ 1942ರ ಅಕ್ಟೋಬರ್ 3ರಂದು ಡಾ. ಕೆ.ಎಂ. ಮುಹಮ್ಮದ್ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಊರಲ್ಲೇ ಕಲಿತ ಅವರು ಕಾಸರಗೋಡಿನಲ್ಲಿ ಪಿಯುಸಿ ಹಾಗೂ ಮೈಸೂರಿನ ಸರಕಾರಿ ಕಾಲೇಜಿನಲ್ಲಿ 1966ರಲ್ಲಿ ಸಿಜಿಐಎಂ ವೈದ್ಯಕೀಯ ಕೋರ್ಸ್ ಮುಗಿಸಿದರು.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೆಲಕಾಲ ವೈದ್ಯರಾಗಿದ್ದ ಅವರು ಉಳ್ಳಾಲ, ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಕ್ಲಿನಿಕ್ ಹೊಂದಿದ್ದರು.
ಆ ಬಳಿಕ ಬಿ.ಸಿ.ರೋಡ್ ಸಮೀಪದ ಪರ್ಲಿಯಾ ಎಂಬಲ್ಲಿ 1985ರಲ್ಲಿ ಪರ್ಲಿಯಾ ನರ್ಸಿಂಗ್ ಹೋಮ್‌ನ್ನು ಸ್ಥಾಪಿಸಿದರು. ಅದರ ಮಾಲಕ ಮತ್ತು ಆಡಳಿತ ನಿರ್ದೇಶಕರೂ ಆಗಿದ್ದ ಅವರು ತನ್ನ ಪತ್ನಿ, ಪರ್ಲಿಯಾ ನರ್ಸಿಂಗ್ ಹೋಮ್‌ನ ಸ್ತ್ರೀರೋಗ ತಜ್ಞೆಯೂ ಆಗಿದ್ದ ಮೈಮುನಾ ಅವರ ಜೊತೆಗೂಡಿ ಸಾವಿರಾರು ಮಂದಿ ರೋಗಿಗಳಿಗೆ ನಗುಮುಖದ ಸೇವೆ ನೀಡಿ ಗಮನ ಸೆಳೆದಿದ್ದರು. ಸ್ಥಳೀಯವಾಗಿ “ಮಮ್ಮೊದು ಡಾಕ್ಟರ್’ ಎಂದೇ ಜನರಿಂದ ಅವರು ಗುರುತಿಸಲ್ಪಟ್ಟಿದ್ದರು.
ಅತ್ಯಂತ ಸರಳ ಜೀವಿಯಾಗಿದ್ದ ಅವರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದರು. ಹಾಗಾಗಿ ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮುಂದುವರಿಸಲಾಗದೆ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದರು. ಸದ್ದಿಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದ ಅವರು ಮಿತ್ತಬೈಲ್ ಜುಮಾ ಮಸೀದಿಯ ಅಧ್ಯಕ್ಷರಾಗಿದ್ದರು. ಕೊಡಂಗೈಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಬಂಟ್ವಾಳ ತಾಲೂಕು ಸೀರತ್ ಕಮಿಟಿಯಲ್ಲೂ ಸಕ್ರಿಯರಾಗಿದ್ದರು.
ಸುಮಾರು 8 ವರ್ಷಗಳ ಕಾಲ ಅನಾರೋಗ್ಯಕ್ಕೀಡಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ಅವರು 2023ರ ಮೇ 22ರಂದು ಪರ್ಲಿಯಾದ ತನ್ನ ಮನೆಯಲ್ಲಿ ನಿಧನರಾದರು. ಅವರಿಗೆ ಪತ್ನಿ, ಮೂವರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

Scroll to Top