Haji S. Abdul Khader

15/10/1944 – 16/03/2024

Haji S Abdul Khader, born on October 15, 1944, in Shettibottu, Adyarkannur, near Mangalore, was a rare individual who dedicated his life to the cause of education and social service. Despite his modest beginnings, he made significant contributions to the communities in Shimoga and Haveri districts, which he considered his karmabhoomi.

Born to Hydros S. and Aisamma, Abdul Khader faced financial hardships early in life. He attended a government school in Kannur from class 1 to 5 but had to discontinue due to financial constraints. His brother-in-law, Dr. Abubakar, invited him to Madikeri, where Abdul Khader continued his studies at St. Michael’s High School from 6th to 8th standard.

During the construction of the Sharavati Dam in Shimoga, Abdul Khader’s elder brother Shekhabba helped him secure a clerical job in the dam construction company. Alongside this, Abdul Khader managed the sales agency for Adyarkannur-based Sitar Beedi, eventually establishing his own “Vijaya” brand beedi industry in Sagar in 1976. He later expanded his business to Savanur in Haveri district, employing thousands of people. His beedis became so popular that they were known as “Sagar Beedi,” and Abdul Khader earned the affectionate title “Sagar Sahukar.”

In addition to his beedi business, Abdul Khader ventured into agriculture, cultivating chiku and mangoes on land he purchased in Sagar. However, his most notable contributions were in the field of education. Understanding its importance, he established educational institutions in Savanur, Sagar, and Adyarkannur. He founded the Markazul Uloom Education Academy in Sagar, which provided coordinated education and shelter to hundreds of orphans. In Savanur, the Karnataka Education Society educated numerous children, while in Shimoga, he established an Urdu Primary School in Tipu Nagar. In Adyarkannur, he founded the Kannur Education and Charitable Trust, which provided education from LKG to Second PUC.

Abdul Khader was known for his discreet philanthropy, often helping economically backward children with school and college fees to ensure they could continue their education. He avoided publicity, preferring to keep his charitable acts private.

He held several significant positions, serving as the President of Kannur English Medium School, Kannur PU Women’s College, Kannur Mahdi Shariat College for Women, and Kannur Al Birr Pre School under the Kannur Education and Charitable Trust. In Sagar, he was involved in social, religious, and political fields, serving as a councilor of Sagar municipality, both as an independent and a congressman, and as the president of Sagar Municipality and Sagar Badria Juma Masjid.

Abdul Khader passed away on March 16, 2024, at the age of 80 at his residence in Mangalore. He is survived by his wife, three sons, and six daughters, who continue to lead his business.


ಶಿಕ್ಷಣಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದ ಹಾಜಿ ಎಸ್. ಅಬ್ದುಲ್ ಖಾದರ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಅಡ್ಯಾರ್ ಕಣ್ಣೂರು ಯೂಸುಫ್ ನಗರದಲ್ಲಿ ಹುಟ್ಟಿ ಬೆಳೆದರೂ ಕೂಡ ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡು ಅಲ್ಲೂ, ಊರಲ್ಲೂ ಶಿಕ್ಷಣಕ್ಕಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಹಾಜಿ ಎಸ್. ಅಬ್ದುಲ್ ಖಾದರ್.
ಬೀಡಿ ಉದ್ಯಮ ಸ್ಥಾಪಿಸಿ ನೂರಾರು ಮಂದಿಗೆ ಉದ್ಯೋಗ ನೀಡಿ ಕೊಡುಗೈ ದಾನಿಯೂ ಆಗಿದ್ದ ಇವರು ಎಂದೂ ಸ್ಥಾನಮಾನಗಳಿಗೆ ಹಂಬಲಿಸಿದವರಲ್ಲ. ಶಿಕ್ಷಣ ಪ್ರೇಮಿಯಾಗಿದ್ದ ಇವರು ಸಮನ್ವಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರು. ಯಾವ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಆಶಿಸಿ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿದ್ದರು. ತನ್ನ ಕಾರ್ಯಚಟುವಟಿಕೆಗಳ ಬಗ್ಗೆ ಎಂದೂ ಪ್ರಚಾರ ಬಯಸದೆ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದರು.

ಅಡ್ಯಾರ್ ಕಣ್ಣೂರಿನ ಶೆಟ್ಟಿಬೊಟ್ಟು ಎಂಬಲ್ಲಿ ಹೈದ್ರೋಸ್ ಎಸ್. ಮತ್ತು ಐಸಮ್ಮ ದಂಪತಿಯ ಪುತ್ರನಾಗಿ ಅಕ್ಟೋಬರ್ 15, 1944ರಲ್ಲಿ ಜನಿಸಿದ್ದ ಅಬ್ದುಲ್ ಖಾದರ್ 1ರಿಂದ 5ನೆ ತರಗತಿವರೆಗೆ ಕಣ್ಣೂರಿನ ಸರಕಾರಿ ಶಾಲೆಯಲ್ಲಿ ಕಲಿತರು. ಮನೆಯಲ್ಲಿ ಆರ್ಥಿಕ ಬಡತನವಿತ್ತು. ಹಾಗಾಗಿ ಶಾಲೆ ಮುಂದುವರಿಸಲಾಗಲಿಲ್ಲ. ಬೀಡಿ ಕಟ್ಟುವುದು ಅನಿವಾರ್ಯವಾಗಿತ್ತು. ದುಡುಕು ಸ್ವಭಾವವೂ ಇತ್ತು. ಅದನ್ನರಿತ ಸೋದರ ಮಾವ ಡಾ. ಅಬೂಬಕರ್ ಇವರನ್ನು ಮಡಿಕೇರಿಗೆ ಕರೆಯಿಸಿಕೊಂಡರು. ಅವರ ಪ್ರೋತ್ಸಾಹದಿಂದ ಸೈಂಟ್ ಮೈಕಲ್ ಪ್ರೌಢಶಾಲೆಯಲ್ಲಿ 6ರಿಂದ 8ನೆ ತರಗತಿವರೆಗೆ ಕಲಿತರು. ಅಷ್ಟರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶರಾವತಿ ಅಣೆಕಟ್ಟಿನ ಕಾಮಗಾರಿ ಬಿರುಸಿನಿಂದ ನಡೆಯುತ್ತಿತ್ತು. ಅದರ ಲೆಕ್ಕಪತ್ರ ಬರೆಯಲು ಒಬ್ಬ ಗುಮಾಸ್ತನ ಅಗತ್ಯವೂ ಇತ್ತು. ವಿಷಯ ತಿಳಿದ ಇವರ ಅಣ್ಣ ಶೇಖಬ್ಬ ತಕ್ಷಣ ತನ್ನ ಸಹೋದರ ಅಬ್ದುಲ್ ಖಾದರ್‌ರನ್ನು ಅಣೆಕಟ್ಟು ನಿರ್ಮಾಣದ ಕಂಪೆನಿಗೆ ಸೇರಿಸಿಕೊಂಡರು. ಅದರೊಂದಿಗೆ ಅಡ್ಯಾರ್ ಕಣ್ಣೂರು ಮೂಲದ ಸಿತಾರ್ ಬೀಡಿಯ ಮಾರಾಟದ ಏಜೆನ್ಸಿಯನ್ನು ಕೂಡ ವಹಿಸಿಕೊಂಡ ಅಬ್ದುಲ್ ಖಾದರ್ ಅಲ್ಲಿ ಬೀಡಿ ಉದ್ಯಮವನ್ನು ಬೆಳೆಸಿದರು. ಅದೇ ವೇಳೆ ಕುಂದಾಪುರ ಕೋಡಿ ಎಂಬಲ್ಲಿನ ಮುಹಮ್ಮದ್ ಎಂಬವರು ಸಾಗರದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದರು. ಅಬ್ದುಲ್ ಖಾದರ್‌ರ ಚಾಕಚಕ್ಯತೆಯನ್ನು ಗಮನಿಸಿದ ಮುಹಮ್ಮದ್ ಹಿರಿಯರ ಜೊತೆ ಮಾತುಕತೆ ನಡೆಸಿ ತನ್ನ ಪುತ್ರಿ ಆಯಿಶಾ ಅವರನ್ನು ಅಬ್ದುಲ್ ಖಾದರ್‌ಗೆ ಮದುವೆ ಮಾಡಿಕೊಟ್ಟರು.
ಸಿತಾರ್ ಬೀಡಿಯ ಏಜೆನ್ಸಿ ಪಡೆದು ಸಾಕಷ್ಟು ಅನುಭವ ಪಡೆದಿದ್ದ ಅಬ್ದುಲ್ ಖಾದರ್ 1976ರಲ್ಲಿ ಸಾಗರದಲ್ಲಿ “ವಿಜಯ” ಬ್ರಾಂಡ್‌ನ ಬೀಡಿ ಉದ್ಯಮವನ್ನು ಸ್ಥಾಪಿಸಿದರು. ಬಳಿಕ ಹಾವೇರಿ ಜಿಲ್ಲೆಯ ಸವಣೂರಿನಲ್ಲೂ ತನ್ನ ಬೀಡಿ ಉದ್ಯಮವನ್ನು ವಿಸ್ತರಿಸಿದರು. ಸಾಗರ ಮತ್ತು ಸವಣೂರಿನಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದರು. ಸಾಗರದಲ್ಲಿ “ವಿಜಯ” ಬ್ರಾಂಡ್ ಮನೆ ಮಾತಾಗಿದ್ದರೆ, ಸವಣೂರಿನಲ್ಲಿ ಇದೇ ಬ್ರಾಂಡ್ “ಸಾಗರ್ ಕಂಪೆನಿ” ಎಂದು ಪ್ರಸಿದ್ಧಿ ಪಡೆಯಿತು. ಅಲ್ಲಿನ ಜನರು “ವಿಜಯ” ಎನ್ನುವ ಬದಲು “ಸಾಗರ್ ಕಂಪೆನಿ”ಯ ಬೀಡಿ ಮತ್ತು ಅಬ್ದುಲ್ ಖಾದರ್ ಅವರನ್ನು “ಸಾಗರ್ ಸಾಹುಕಾರ್” ಎಂದು ಕರೆಯತೊಡಗಿದರು.

ಬೀಡಿ ಉದ್ಯಮದ ಜೊತೆಗೆ ಕೃಷಿಯಲ್ಲೂ ಅಬ್ದುಲ್ ಖಾದರ್ ತೊಡಗಿಸಿಕೊಂಡರು. ಸಾಗರದಲ್ಲಿ ಜಮೀನು ಖರೀದಿಸಿ ಚಿಕ್ಕು, ಮಾವಿನ ಹಣ್ಣನ್ನು ಬೆಳೆಯಲು ಆರಂಭಿಸಿದರು. ಶಿಕ್ಷಣದ ಮಹತ್ವವನ್ನು ಅರಿತಿದ್ದ ಹಾಜಿ ಎಸ್. ಅಬ್ದುಲ್ ಖಾದರ್ ಉದ್ಯಮದ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನೂ ಆರಂಭಿಸಿದರು. ಹಾವೇರಿಯ ಸವಣೂರು, ಶಿವಮೊಗ್ಗದ ಸಾಗರ, ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕಣ್ಣೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಅನಾಥ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅಬ್ದುಲ್ ಖಾದರ್ ಸಾಗರದಲ್ಲಿ ಮರ್ಕಝುಲ್ ಉಲೂಂ ಎಜುಕೇಶನ್ ಅಕಾಡಮಿ ಸ್ಥಾಪಿಸಿ ಸಮನ್ವಯ ಶಿಕ್ಷಣ ನೀಡುವುದರ ಜೊತೆಗೆ ನೂರಾರು ಅನಾಥ ಮಕ್ಕಳ ಪಾಲಿಗೆ ಆಶ್ರಯದಾತರಾದರು. ಸವಣೂರಿನಲ್ಲಿ ಕರ್ನಾಟಕ ಎಜುಕೇಶನ್ ಸೊಸೈಟಿಯ ಅಲ್ಲಿನ ನೂರಾರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿದರು. ಶಿವಮೊಗ್ಗದ ಟಿಪ್ಪು ನಗರ ಎಂಬಲ್ಲಿ ಆಯಿಶಾ ಎಸ್.ಎಚ್. ಅಬ್ದುಲ್ ಖಾದರ್ ಉರ್ದು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದರು. ಅಡ್ಯಾರ್ ಕಣ್ಣೂರಿನಲ್ಲಿ ಕಣ್ಣೂರು ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗಿನ ಮಕ್ಕಳಿಗೆ ಶಿಕ್ಷಣ ನೀಡಿದರು.
ಶಾಲಾ ಶುಲ್ಕವನ್ನು ಭರಿಸಲು ಪರದಾಡುತ್ತಿದ್ದ ಆರ್ಥಿಕವಾಗಿ ಹಿಂದುಳಿದ ನೂರಾರು ಮಕ್ಕಳನ್ನು ಗುರುತಿಸಿದ್ದರಲ್ಲದೆ ಶಾಲಾ -ಕಾಲೇಜಿನ ಶುಲ್ಕ ಭರಿಸಿ ಪ್ರೋತ್ಸಾಹಿಸುತ್ತಿದ್ದರು. ಬಡಮಕ್ಕಳು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸದಂತೆ ಸದಾ ಎಚ್ಚರ ವಹಿಸುತ್ತಿದ್ದರು. ಕೊಡುಗೈ ದಾನಿಯೂ ಆಗಿದ್ದ ಇವರು ತಾನು ಮಾಡಿದ್ದನ್ನು ಗೌಪ್ಯವಾಗಿಡಲು ಬಯಸುತ್ತಿದ್ದರು. ತನ್ನ ದಾನವನ್ನು ಪ್ರಚಾರಕ್ಕೆ ಬಳಸಿಕೊಳ್ಳದೆ ಕೈಲಾದಷ್ಟು ಸಹಾಯ ಮಾಡಿ ಅನೇಕ ಮಂದಿಗೆ ಆಸರೆಯಾಗಿದ್ದರು.
ಕಣ್ಣೂರು ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧೀನದಲ್ಲಿರುವ ಕಣ್ಣೂರು ಇಂಗ್ಲಿಷ್ ಮಾಧ್ಯಮ ಶಾಲೆ, ಕಣ್ಣೂರು ಪಿಯು ಮಹಿಳಾ ಕಾಲೇಜು, ಕಣ್ಣೂರು ಮಹ್ದಿಯ ಮಹಿಳಾ ಶರೀಅತ್ ಕಾಲೇಜು, ಕಣ್ಣೂರು ಅಲ್ ಬಿರ್ರ್‌ ಪ್ರೀ ಸ್ಕೂಲ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ವಿಜಯ ಬ್ರಾಂಡ್‌ನ ಬೀಡಿಯನ್ನು ಸಾಗರಕ್ಕೆ ಪರಿಚಯಿಸಿದ್ದ ಅಬ್ದುಲ್ ಖಾದರ್ ಅನೇಕ ವರ್ಷಗಳ ಕಾಲ ಅಲ್ಲೇ ನೆಲೆಸಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಸಾಗರ ಪುರಸಭೆಗೆ ಎರಡು ಬಾರಿ ಪಕ್ಷೇತರರಾಗಿ ಮತ್ತು ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೌನ್ಸಿಲರ್ ಆಗಿದ್ದರು. ಸಾಗರ ಪುರಸಭೆಯ ಅಧ್ಯಕ್ಷರಾಗಿಯೂ ಒಂದು ಅವಧಿಗೆ ಕಾರ್ಯನಿರ್ವಹಿಸಿದ್ದರು. ಸಾಗರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸಾಗರ, ಸವಣೂರು, ಮಂಗಳೂರಿನಲ್ಲಿ ಸ್ವಂತ ಮನೆಯನ್ನೂ ನಿರ್ಮಿಸಿದ್ದರು. ಅಡ್ಯಾರ್ ಕಣ್ಣೂರಿನಲ್ಲಿ ಹುಟ್ಟಿ ಬೆಳೆದು, ಮಡಿಕೇರಿಯಲ್ಲಿ ಶಿಕ್ಷಣ ಪಡೆದು, ಸಾಗರ ಮತ್ತು ಹಾವೇರಿಯಲ್ಲಿ ಉದ್ಯಮಿಯಾಗಿದ್ದ ಹಾಜಿ ಎಸ್. ಅಬ್ದುಲ್ ಖಾದರ್ 2024ರ ಮಾರ್ಚ್ 16ರಂದು ತನ್ನ 80ನೆ ವಯಸ್ಸಿನಲ್ಲಿ ಮಂಗಳೂರಿನ ಸ್ವಗೃಹದಲ್ಲಿ ನಿಧನರಾದರು. ಇವರಿಗೆ ಪತ್ನಿ, ಮೂವರು ಪುತ್ರರು ಮತ್ತು ಆರು ಮಂದಿ ಪುತ್ರಿಯರು ಇದ್ದಾರೆ. ಇದೀಗ ಇವರ ಉದ್ಯಮವನ್ನು ಮಕ್ಕಳು ಮುನ್ನಡೆಸುತ್ತಿದ್ದಾರೆ.

Scroll to Top