ಮರೆಯಲಾಗದ ಮರ್ಹೂಂ ಬ್ಯಾರಿ ಮಹನೀಯರು ಭಾಗ-2- ಮಾಹಿತಿ ನೀಡಲು ಮನವಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಮರಕೊಗಾವಾತೊ ಮರ್ಹೂಂ ಬ್ಯಾರಿಙ (ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು) ಎಂಬ ಗ್ರಂಥವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಇದೀಗ ಈ ಐತಿಹಾಸಿಕ ಗ್ರಂಥದ ಭಾಗ -2ರ ಪ್ರಕಟಣೆಗೆ ಅಕಾಡೆಮಿ ನಿರ್ಧರಿಸಿದೆ. ಈ ಗ್ರಂಥದ ಸಂಪಾದಕರಾಗಿ ಪತ್ರಕರ್ತ ಹಂಝ ಮಲಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ಮತ್ತು ತೆರೆಮರೆಯಲ್ಲಿದ್ದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮರ್ಹೂಮ್ ಬ್ಯಾರಿ ಮಹನೀಯರ ಹೆಸರು ಮತ್ತು ಪೂರಕ ಮಾಹಿತಿಯನ್ನು ಗ್ರಂಥದ ಸಂಪಾದಕ ಹಂಝ ಮಲಾರ್‌ರವರ ಮೊ.ಸಂ: 9481017495 ಅಥವಾ ಅಕಾಡೆಮಿ ಕಚೇರಿಯ ಇಮೇಲ್ bearyacademy@yahoo.in ಅಥವಾ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಸಾಮರ್ಥ್ಯ ಸೌಧ, ಮಂಗಳೂರು ತಾಲೂಕು ಪಂಚಾಯತ್ ಹಳೇ ಕಟ್ಟಡ, 2ನೇ ಮಹಡಿ, ಮಿನಿ ವಿಧಾನಸೌಧದ ಬಳಿ, ಮಂಗಳೂರು 575001 ಈ ವಿಳಾಸಕ್ಕೆ ದಿನಾಂಕ: 25.09.2024ರೊಳಗೆ ಕಳುಹಿಸಿಕೊಡಬಹುದು. ಇದು ಮುಂದಿನ ಪೀಳಿಗೆಗೆ ಹಾಗೂ ಇತಿಹಾಸದಲ್ಲಿ ಅಚ್ಚೊತ್ತಿ ನಿಲ್ಲುವ ಮರ್ಹೂಂ ಬ್ಯಾರಿ ಮಹನೀಯರ ಕುರಿತಾಗಿರುವ ಐತಿಹಾಸಿಕ ಗ್ರಂಥವಾಗಿರುವುದರಿಂದ ಸಾರ್ವಜನಿಕರು ಈ ಯೋಜನೆಯಲ್ಲಿ ಕೈಜೋಡಿಸಬೇಕೆಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು.ಎಚ್. ಮನವಿ ಮಾಡಿದ್ದಾರೆ.

Scroll to Top