ಝಕರಿಯಾ ಜೋಕಟ್ಟೆ ಅವರಿಗೆ RAMCon ಸಾಧಕ ಪ್ರಶಸ್ತಿ

ಒಂದು ಕಾಲದಲ್ಲಿ ಕೇವಲ ಎರಡಂಕೆಯ ಮಾಸಿಕ ಸಂಬಳಕ್ಕೆ ದುಡಿಯುತ್ತಿದ್ದ ಬ್ಯಾರಿ ಸಮುದಾಯದ ಯುವಕ ಸೌದಿಗೆ ತೆರಳಿ ಏಳೂವರೆ ಸಾವಿರ ಜನರಿಗೆ ಉದ್ಯೋಗ ನೀಡಿ ಅಲ್ ಮುಝೈನ್ ಹೆಸರಲ್ಲಿ ಸಾಮ್ರಾಜ್ಯ ಸ್ಥಾಪಿಸಿರುವ ಝಕರಿಯಾ ಜೋಕಟ್ಟೆ ಸೌದಿ ಅರೇಬಿಯಾದ ಪ್ರತಿಷ್ಠಿತ RAMCon ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಸೌದಿ ಅರೇಬಿಯಾದ ಅಲ್ ಖೋಬರ್ ಪಂಚತಾರಾ ಹೋಟೆಲ್ ಮೂವ್ ಇನ್ ಪಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಮ್ಕೋನ್ (RAMCon) ವಿಶ್ವಾಸಾರ್ಹತೆ ಮತ್ತು ನಿರ್ವಹಣೆ ಸಮಾವೇಶ ಹಾಗೂ ಪ್ರದರ್ಶನ – 2024 ಸಮಾರಂಭದಲ್ಲಿ ಕಠಿಣ ಸಾಧನೆ ಮತ್ತು ಪರಿಶ್ರಮಕ್ಕಾಗಿ “ಅಲ್ ಮುಝೈನ್” ಗಲ್ಫ್ ಸೌದಿ ಕಾಂಟ್ರಾಕ್ಟರ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಝಕರಿಯಾ ಬಜ್ಪೆ (ಜೋಕಟ್ಟೆ) ಅವರಿಗೆ RAMCon ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಝಕರಿಯಾ ಜೋಕಟ್ಟೆ ಅವರು ಈ ಹಿಂದೆ ರಾಷ್ಟ್ರೀಯ – ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾದ ಕರಾವಳಿಯ ಅನಿವಾಸಿ ಉದ್ಯಮಿ ಮತ್ತು ಉತ್ತಮ ಸಂಘಟಕ. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮತ್ತು ಹಿದಾಯ ಫೌಂಡೇಶನ್ ನ ಛೆಯರ್ಮೇನ್ ಆಗಿ ಹಲವಾರು ಅಶಕ್ತರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಅವರ ಉದ್ಯಮ ಮತ್ತು ಫ್ಯಾಮಿಲಿ ಟ್ರಸ್ಟ್ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮತ್ತು ಕರಾವಳಿಯ ಸಂಸ್ಕೃತಿಯನ್ನು ಸೌದಿ ಅರೇಬಿಯಾದ ನೆಲದಲ್ಲಿ ಪಸರಿಸುವಲ್ಲಿ ಹತ್ತುಹಲವು ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಝಕರಿಯಾ ನೇತೃತ್ವದಲ್ಲಿ ಸೌದಿಯ ನಾನಾ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಬ್ಯಾರಿ ಸಮುದಾಯದ ಹೆಮ್ಮೆಯ ಸಾಧಕ ಝಕರಿಯಾ ಜೋಕಟ್ಟೆಯವರಿಗೆ bearyinfo.com ತಂಡದ ತುಂಬುಹೃದಯದ ಅಭಿನಂದನೆಗಳು

Bajpe Zakria Wins RAMCon 2024 Award

Zakria Jokatte, now the Chief Executive Officer of Al Muzain Gulf Saudi Contracting Co., once worked as a wage earner with a monthly salary in the double digits. He has now added the prestigious Executive Achiever Award at the 5th RAMCon—Reliability and Maintainability Conference and Exhibition 2024, held on Tuesday, September 24. An exemplary achiever from the Beary community, Zakria moved to Saudi Arabia and established a business empire under the name ‘Al Muzain,’ which now employs over seven thousand people.

The prestigious conference took place at the auditorium of the Movenpick, a five-star hotel in Al Khobar.

Zakria, who has won several national and international awards and accolades, is a successful NRI from the coastal region and a great organizer. As the Chairman of Mangalore’s M Friends Charitable Trust and Hidaya Foundation, he has helped countless individuals. He is also a well-known figure in social service through his activities supported by his business and family trust. Zakria has been instrumental in promoting Kannada and coastal culture by helping organize various cultural and literary programs across Saudi Arabia.

On this occasion, the team of bearyinfo.com congratulates Mr. Zakria Bajpe on his remarkable achievement.

Author: Rasheed Vitla

Scroll to Top